ಬಂಟ್ವಾಳ, ಎಪ್ರಿಲ್ 17, 2025 (ಕರಾವಳಿ ಟೈಮ್ಸ್) : ನಾಯಿ ಅಡ್ಡ ಬಂದ ಪರಿಣಾಮ ಸವಾರನ ನಿಯಂತ್ರಣ ಮೀರಿ ದ್ವಿಚಕ್ರ ವಾಹನ ರಸ್ತೆಗೆ ಬಿದ್ದು ಸಹಸವಾರ ಗಾಯಗೊಂಡ ಘಟನೆ ವೀರಕಂಭ ಗ್ರಾಮ ಪಂಚಾಯತ್ ಬಳಿ ಸಂಭವಿಸಿದೆ.
ಗಾಯಗೊಂಡ ದ್ವಿಚಕ್ರ ಸಹಸವಾರನನ್ನು ವೀರಕಂಭ ಮಸೀದಿ ಬಳಿ ನಿವಾಸಿ ವಿ ಕೆ ಅಬ್ದುಲ್ ಕುಂಞÂ (68) ಎಂದು ಹೆಸರಿಸಲಾಗಿದೆ. ಇವರು ತಮ್ಮ ಚಿಕ್ಕಪ್ಪನ ಮಗ ಅಬ್ದುಲ್ ರಹಿಮಾನ್ ಎಂಬವರ ದ್ವಿಚಕ್ರ ವಾಹನದಲ್ಲಿ ಸಹ ಸವಾರನಾಗಿ ಕುಳಿತುಕೊಂಡು ತೊಕ್ಕಟ್ಟುವಿನಿಂದ ವೀರಕಂಭ ಎಂಬಲ್ಲಿಯ ತನ್ನ ಮನೆಗೆ ಬರುತ್ತಿದ್ದ ವೇಳೆ ವೀರಕಂಬ ಗ್ರಾಮ ಪಂಚಾಯತ್ ಬಳಿ ತಲುಪಿದಾಗ, ರಸ್ತೆಯಲ್ಲಿ ನಾಯಿಯೊಂದು ಅಡ್ಡ ಬಂದಾಗ ಸವಾರನ ನಿಯಂತ್ರಣ ಮೀರಿ ದ್ವಿಚಕ್ರ ವಾಹನ ಸವಾರರ ಸಹಿತ ರಸ್ತೆಗೆ ಬಿದ್ದು ಈ ಅಪಘಾತ ಸಂಭವಿಸಿದೆ. ಅಪಘಾತದಿಂದ ಸಹಸವಾರ ವಿ ಕೆ ಅಬ್ದುಲ್ ಕುಂಞ ಅವರ ಕೈಗೆ ತೀವ್ರ ತರದ ಗಾಯವಾಗಿದೆ. ಇವರನ್ನು ಕಲ್ಲಡ್ಕ ಪುಷ್ಪರಾಜ್ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ಬಳಿಕ ಪಡೀಲ್ ಜನಪ್ರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment