ಬಂಟ್ವಾಳ, ಎಪ್ರಿಲ್ 11, 2025 (ಕರಾವಳಿ ಟೈಮ್ಸ್) : ಪುದು ಗ್ರಾಮದ ಫರಂಗಿಪೇಟೆ ಸಮೀಪದ ಕೋಡಿಮಜಲು ನಿವಾಸಿ ಚಾಲಕ ವೃತ್ತಿಯ ಯುವಕನೋರ್ವ ಬುಧವಾರ ರಾತ್ರಿಯಿಂದ ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಲ್ಲಿನ ನಿವಾಸಿ ಮೊಹಮ್ಮದ್ ಅಸ್ಲಂ ಎಂಬವರ ಪುತ್ರ ಮಹಮ್ಮದ್ ಅಶ್ಫಾನ್ ಎಂಬಾತನೇ ಕಾಣೆಯಾದ ವ್ಯಕ್ತಿ. ಈತ ಚಾಲಕ ಕೆಲಸ ಮಾಡಿಕೊಂಡಿದ್ದು, ಬುಧವಾರ ರಾತ್ರಿ 7.30 ಗಂಟೆಗೆ ತನ್ನ ತಾಯಿ ಸಮೀಮಾ ಎಂಬವರನ್ನು ಬೈಕಿನಲ್ಲಿ ಫರಂಗಿಪೇಟೆಯಿಂದ ಕುಂಪಣಮಜಲು-ಕೋಡಿಮಜಲು ಮನೆಗೆ ಬಿಟ್ಟು, ರಾತ್ರಿ ಸುಮಾರು 8 ಗಂಟೆಗೆ ಈಗ ಬರುತ್ತೇನೆ ಎಂದು ಬೈಕಿನಲ್ಲಿ ತೆರಳಿದವನು ಮನೆಗೆ ವಾಪಾಸು ಬಾರದೆ ಕಾಣೆಯಾಗಿರುತ್ತಾನೆ ಎಂದು ಆತನ ತಂದೆ ನೀಡಿರುವ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment