ಬಂಟ್ವಾಳ, ಎಪ್ರಿಲ್ 12, 2025 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ಗೂಡಿನಬಳಿ ಹಳೇ ನೇತ್ರಾವತಿ ಸೇತುವೆಯಡಿ ವ್ಯಕ್ತಿಯೋರ್ವರ ಮೃತದೇಹ ಶನಿವಾರ ಕಂಡು ಬಂದಿದ್ದು, ಸ್ಥಳಕ್ಕಾಗಮಿಸಿದ ಬಂಟ್ವಾಳ ನಗರ ಪೊಲೀಸರು ಮೃತ ವ್ಯಕ್ತಿಯ ಗುರುತು ಪತ್ತೆ ಹಚ್ಚಿದ್ದಾರೆ.
ಮೃತ ವ್ಯಕ್ತಿಯನ್ನು ಉಳ್ಳಾಲ ತಾಲೂಕು ಕುಂಪಲ ಗ್ರಾಮದ ಸೋಮೇಶ್ವರ ನಿವಾಸಿ ನಾಗೇಶ್ ಪೂಜಾರಿ ಎಂದು ಗುರುತಿಸಲಾಗಿದೆ. ವಿಟ್ಲ ಸಮೀಪದ ಹೋಟೆಲಿನಲ್ಲಿ ಕೆಲಸ ಮಾಡುತ್ತಿದ್ದ ನಾಗೇಶ್ ವಿಪರೀತ ಅಮಲು ಪದಾರ್ಥ ಸೇವನೆಯ ಚಟ ಹೊಂದಿದ್ದ ಎನ್ನಲಾಗಿದೆ. ಅವಿವಾಹಿತನಾಗಿದ್ದ ಈತ ಅದ್ಯಾವುದೋ ಕಾರಣಕ್ಕೆ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಬಗ್ಗೆ ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮೇಲಕ್ತೆತ್ತುವ ವ್ಯವಸ್ಥೆ ಮಾಡಿ ಬಳಿಕ ಮೃತದೇಹವನ್ನು ಕುಟುಂಬಿಕರಿಗೆ ಹಸ್ತಾಂತರಿಸಿದ್ದಾರೆ.
0 comments:
Post a Comment