ಫರಂಗಿಪೇಟೆ : ಬಟ್ಟೆ ಅಂಗಡಿಗೆ ನುಗ್ಗಿ ಲಕ್ಷಾಂತರ ನಗದು ಹಣ ಲಪಟಾಯಿಸಿದ ಕಳ್ಳರು - Karavali Times ಫರಂಗಿಪೇಟೆ : ಬಟ್ಟೆ ಅಂಗಡಿಗೆ ನುಗ್ಗಿ ಲಕ್ಷಾಂತರ ನಗದು ಹಣ ಲಪಟಾಯಿಸಿದ ಕಳ್ಳರು - Karavali Times

728x90

13 April 2025

ಫರಂಗಿಪೇಟೆ : ಬಟ್ಟೆ ಅಂಗಡಿಗೆ ನುಗ್ಗಿ ಲಕ್ಷಾಂತರ ನಗದು ಹಣ ಲಪಟಾಯಿಸಿದ ಕಳ್ಳರು

 ಬಂಟ್ವಾಳ, ಎಪ್ರಿಲ್ 13, 2025 (ಕರಾವಳಿ ಟೈಮ್ಸ್) : ಬಟ್ಟೆ ಅಂಗಡಿಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ನಗದು ಹಣವನ್ನು ಎಗರಿಸಿದ ಘಟನೆ ಪುದು ಗ್ರಾಮದ ಫರಂಗಿಪೇಟೆ ಜಂಕ್ಷನ್ನಿನಲ್ಲಿ ಶುಕ್ರವಾರ ರಾತ್ರಿ ನಡೆದಿದ್ದು, ಶನಿವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. 

ಫರಂಗಿಪೇಟೆಯ ವಿಶ್ವಾಸ ಸಿಟಿ ಸೆಂಟರಿನ ಮಂಗಳೂರು ತಾಲೂಕು, ಅಡ್ಯಾರ್-ಕಣ್ಣೂರು ಸಮೀಪದ ಕುಂಡಾಲು ನಿವಾಸಿ ಡಿ ಮುಹಮ್ಮದ್ ಅವರ ಪುತ್ರ ಇರ್ಫಾನ್ ಅವರಿಗೆ ಸೇರಿದ ವೈಟ್ ಲೈನ್ ಕಿಡ್ಸ್ ವಲ್ರ್ಡ್ ಬಟ್ಟೆ ಅಂಗಡಿಯಲ್ಲಿ ಈ ಕಳವು ಕೃತ್ಯ ನಡೆದಿದೆ. 

ಶುಕ್ರವಾರ ರಾತ್ರಿ 9 ಗಂಟೆಗೆ ವ್ಯಾಪಾರ ಮುಗಿಸಿ ಅಂಗಡಿಗೆ ಬೀಗ ಹಾಕಿ ಮನೆಗೆ ತೆರಳಿದ್ದು, ಮರುದಿನ ಶನಿವಾರ ಬೆಳಿಗ್ಗೆ 9 ಗಂಟೆಗೆ ಅಂಗಡಿಯ ಕೆಲಸದಾಳು ಅಫ್ರಾ ಎಂಬಾಕೆ ಬಾಗಿಲು ತೆರೆಯಲು ಬಂದಾಗ ಈ ಕಳವು ಕೃತ್ಯ ಬೆಳಕಿಗೆ ಬಂದಿದೆ. ಅಂಗಡಿಯ ಸೀಸಿ ಕ್ಯಾಮೆರಾದ ಕೇಬಲ್ ಕಟ್ ಮಾಡಿ ಒಳನುಗ್ಗಿದ ಕಳ್ಳರು ಕ್ಯಾಶ್ ಕೌಂಟರಿನ ಒಳಗಿದ್ದ 4 ಲಕ್ಷ ರೂಪಾಯಿ ಹಣವನ್ನು ಕಳ್ಳರು ಕಳವುಗೈದಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಫರಂಗಿಪೇಟೆ : ಬಟ್ಟೆ ಅಂಗಡಿಗೆ ನುಗ್ಗಿ ಲಕ್ಷಾಂತರ ನಗದು ಹಣ ಲಪಟಾಯಿಸಿದ ಕಳ್ಳರು Rating: 5 Reviewed By: karavali Times
Scroll to Top