ಸರಕಾರದ ಕೆಲಸ ದೇವರ ಕೆಲಸ ಎಂಬುದನ್ನು ಸಾರ್ಥಕಗೊಳಿಸುವ ರೀತಿಯಲ್ಲಿ ಪ್ರತಿಯೊಬ್ಬ ಜನಪ್ರತಿನಿಧಿ ಕಾರ್ಯಪ್ರವೃತ್ತರಾಗಬೇಕು : ಸಿಎಂ ಸಿದ್ದರಾಮಯ್ಯ ಕರೆ - Karavali Times ಸರಕಾರದ ಕೆಲಸ ದೇವರ ಕೆಲಸ ಎಂಬುದನ್ನು ಸಾರ್ಥಕಗೊಳಿಸುವ ರೀತಿಯಲ್ಲಿ ಪ್ರತಿಯೊಬ್ಬ ಜನಪ್ರತಿನಿಧಿ ಕಾರ್ಯಪ್ರವೃತ್ತರಾಗಬೇಕು : ಸಿಎಂ ಸಿದ್ದರಾಮಯ್ಯ ಕರೆ - Karavali Times

728x90

7 April 2025

ಸರಕಾರದ ಕೆಲಸ ದೇವರ ಕೆಲಸ ಎಂಬುದನ್ನು ಸಾರ್ಥಕಗೊಳಿಸುವ ರೀತಿಯಲ್ಲಿ ಪ್ರತಿಯೊಬ್ಬ ಜನಪ್ರತಿನಿಧಿ ಕಾರ್ಯಪ್ರವೃತ್ತರಾಗಬೇಕು : ಸಿಎಂ ಸಿದ್ದರಾಮಯ್ಯ ಕರೆ

 ಸ್ಪೀಕರ್ ಖಾದರ್ ಅವರ ಮಹತ್ವಾಕಾಂಕ್ಷಿ ಕನಸಿನ ವಿಧಾನಸೌಧದ ಶಾಶ್ವತ ವಿದ್ಯುತ್ ದೀಪಾಲಂಕಾರ ಉದ್ಘಾಟಿಸಿದ ಸಿಎಂ 


ಬೆಂಗಳೂರು, ಎಪ್ರಿಲ್ 07, 2025 (ಕರಾವಳಿ ಟೈಮ್ಸ್) : ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಫರೀದ್ ಅವರ ಮಹತ್ವಾಕಾಂಕ್ಷಿ ಕನಸಿನಂತೆ ವಿಧಾನಸೌಧಕ್ಕೆ ಅಳವಡಿಸಲಾಗಿರುವ ಶಾಶ್ವತ ವಿದ್ಯುತ್ ದೀಪಾಲಂಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಪ್ರಿಲ್ 6 ರ ಭಾನುವಾರ ಸಂಜೆ ಉದ್ಘಾಟಿಸಿದರು. 

ಈ ಹಿಂದೆ ರಾಷ್ಟ್ರೀಯ ಹಬ್ಬಗಳು, ವಿಶೇಷ ಸಂದರ್ಭಗಳಲ್ಲಿ ಮಾತ್ರ ವಿಧಾನ ಸೌಧಕ್ಕೆ ದೀಪಾಲಂಕಾರ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ ಇನ್ನು ಮುಂದೆ ವಿಧಾನಸೌಧ ಶಾಶ್ವತ ವಿದ್ಯುತ್ ದೀಪಗಳಿಂದ ಕಂಗೊಳಿಸಲಿದೆ. ಪ್ರತಿ ಶನಿವಾರ ಹಾಗೂ ಭಾನುವಾರ ವರ್ಣರಂಜಿತ ವಿದ್ಯುತ್ ದೀಪಗಳಿಂದ ವಿಧಾನಸೌಧ ಝಗಮಗಿಸಲಿದೆ. 

ವಿಧಾನಸೌಧದ ಶಾಶ್ವತ ದೀಪಾಲಂಕಾರ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಸಂಸತ್ತು, ವಿಧಾನಸೌಧಗಳು ಜನರ, ರಾಜ್ಯದ ಹಾಗೂ ದೇಶದ ಸಮಸ್ಯೆಗಳನ್ನು ಚರ್ಚಿಸಿ, ಪರಿಹಾರ ಕಂಡುಕೊಳ್ಳುವ ದೇಗುಲಗಳು. ಸರ್ಕಾರದ ಕೆಲಸ ದೇವರ ಕೆಲಸ ಎನ್ನುವ ಮಾತನ್ನು ಪ್ರತಿಯೊಬ್ಬರೂ ಸಾರ್ಥಕಗೊಳಿಸುವ ರೀತಿಯಲ್ಲಿ ಕೆಲಸ ಮಾಡಿ ರಾಜ್ಯದ ಕಟ್ಟ ಕಡೆಯ ಮನುಷ್ಯ£ಗೂ ನ್ಯಾಯ, ನೆಮ್ಮದಿ ಕೊಡಿಸಬೇಕು ಎಂದು ಕರೆ ನೀಡಿದರು.

ಕಳೆದ ಒಂದು ತಿಂಗಳಲ್ಲಿ ಎಲ್ಲ ಭಾಗಗಳಲ್ಲೂ ಅಲಂಕಾರ ಮಾಡಲಾಗಿದೆ. ಸಾರ್ವಜನಿಕರ ವೀಕ್ಷಣೆಗೂ ಅವಕಾಶ ಮಾಡಿಕೊಡುತ್ತೇವೆ. ಮುಂದಿನ 5 ವರ್ಷಗಳ ಮೈಂಟೇನ್ ಮಾಡೋಕೆ ಷರತ್ತು ಹಾಕಲಾಗಿದೆ. ಈ ಹಿಂದೆ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಮಹತ್ವದ ದಿನಗಳಲ್ಲಿ ದೀಪಾಲಂಕಾರಕ್ಕೆ ಲಕ್ಷಾಂತರ ಖರ್ಚು ಮಾಡಲಾಗುತ್ತಿತ್ತು. ಇದೀಗ ಶಾಶ್ವತ ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಲಾಗಿದ್ದು, ಮೈಸೂರು ಅರಮನೆ ರೀತಿ ಅಭಿವೃದ್ಧಿ ಮಾಡುವ ವಿಶ್ವಾಸ ಇದೆ. ಟೀಂ ವರ್ಕ್ ಕೆಲಸ ಮಾಡಿ ದೇಶ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸುವ ಕೆಲಸವನ್ನ ಮಾಡುತ್ತೇವೆ ಎಂದು ಸಿಎಂ ಹೇಳಿದರು. 

ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ ನಮ್ಮನ್ನು ನಾವು ಆಳ್ವಿಕೆ ಮಾಡಿಕೊಳ್ಳುವ ವ್ಯವಸ್ಥೆ ಬಂದಿದೆ. ಆಗ ವಿಧಾನಸೌಧ ನಿರ್ಮಾಣ ಮಾಡಿದ್ದಾರೆ. ದೇಶದ ಸಮಸ್ಯೆ ಚರ್ಚೆ ಮಾಡೋಕೆ ಚುನಾಯಿತ ಪ್ರತಿನಿಧಿಗಳು, ಎಂಪಿಗಳು, ಶಾಸಕರು ಒಂದು ಕಡೆ ದೇಶದ ಆಯಾ ರಾಜ್ಯದ ಸಮಸ್ಯೆ ಚರ್ಚೆ ಮಾಡೋಕೆ ಕೇಂದ್ರ ಮಾಡಿದರು. ಅದಕ್ಕೆ ನಾವು ಪ್ರಜಾಪ್ರಭುತ್ವ ದೇವಾಲಯ ಅಂತ ಕೆರೆಯುತ್ತೇವೆ. ಕೆಂಗಲ್ ಹನುಮಂತಯ್ಯನವರು ಸರಕಾರದ ಕೆಲಸ ದೇವರ ಕೆಲಸ ಅಂತ ಹೇಳಿದ್ದಾರೆ. ಇದನ್ನು ಜನಪ್ರತಿನಿಧಿಗಳು ಅರ್ಥಮಾಡಿಕೊಳ್ಳಬೇಕು. ಸಮಾಜದ ಕಟ್ಟಕಡೆಯ ಮನುಷ್ಯನಿಗೂ ನನಗೆ ಸ್ವಾತಂತ್ರ್ಯ ಸಿಕ್ಕಿದೆ ಅನಿಸಬೇಕು. ಆಗ ಮಾತ್ರ ಸಮಾಜದ ಕಟ್ಟಕಡೆಯ ಮನುಷ್ಯ ನೆಮ್ಮದಿಯಿಂದ ಇರೋಕೆ ಸಾಧ್ಯ. ಜೊತೆಗೆ ಅಸಮಾನತೆ ತೆಗೆದುಹಾಕುವ ಕೆಲಸ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಜನಪ್ರತಿನಿಧಿಗಳಿಗೆ ಸಲಹೆ ನೀಡಿದರು.

  • Blogger Comments
  • Facebook Comments

0 comments:

Post a Comment

Item Reviewed: ಸರಕಾರದ ಕೆಲಸ ದೇವರ ಕೆಲಸ ಎಂಬುದನ್ನು ಸಾರ್ಥಕಗೊಳಿಸುವ ರೀತಿಯಲ್ಲಿ ಪ್ರತಿಯೊಬ್ಬ ಜನಪ್ರತಿನಿಧಿ ಕಾರ್ಯಪ್ರವೃತ್ತರಾಗಬೇಕು : ಸಿಎಂ ಸಿದ್ದರಾಮಯ್ಯ ಕರೆ Rating: 5 Reviewed By: karavali Times
Scroll to Top