ಬಂಟ್ವಾಳ, ಎಪ್ರಿಲ್ 12, 2025 (ಕರಾವಳಿ ಟೈಮ್ಸ್) : ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಸವಾರರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬಿ ಮೂಡ ಗ್ರಾಮದ ಪರ್ಲಿಯಾ ಕ್ವಾಟ್ರಸ್ ಬಳಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.
ಗಾಯಗೊಂಡು ಸ್ಕೂಟರ್ ಸವಾರರನ್ನು ನಂದರಬೆಟ್ಟು ನಿವಾಸಿ ನೌಶಾದ್ ಹಾಗೂ ಇನ್ನೊಂದು ಸ್ಕೂಟರ್ ಸವಾರ ಇಸ್ರೀಫಾ ಎಂದು ಹೆಸರಿಸಲಾಗಿದೆ. ನೌಶಾದ್ ತನ್ನ ಸ್ಕೂಟರಿನಲ್ಲಿ ತೆರಳುತ್ತಿದ್ದ ವೇಳೆ ಪರ್ಲಿಯಾ ಕ್ವಾಟ್ರಸ್ ಬಳಿ ಎದುರಿನಿಂದ ಇನ್ನೊಂದು ಸ್ಕೂಟರಿನಲ್ಲಿ ಬಂದ ಇಸ್ರಿಫಾ ನಾಯಿ ಅಡ್ಡ ಬಂದುದನ್ನು ತಪ್ಪಿಸಲು ಪ್ರಯತ್ನಿಸಿ ನೌಶಾದ್ ಸವಾರಿ ಮಾಡಿಕೊಂಡು ಬಂದ ಸ್ಕೂಟರಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ಇಬ್ಬರೂ ಸ್ಕೂಟರ್ ಸವಾರರಿಗೆ ಗಾಯಗಳಾಗಿದ್ದು, ಅವರನ್ನು ಪರ್ಲಿಯಾ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪಡೀಲ್ ಜನಪ್ರಿಯ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment