ಬಂಟ್ವಾಳ, ಎಪ್ರಿಲ್ 10, 2025 (ಕರಾವಳಿ ಟೈಮ್ಸ್) : ಶಬರಿಮಲೆಗೆ ತೆರಳಿದ್ದ ಕೆದಿಲ ಗ್ರಾಮದ ಪಾಟ್ರಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಉಮರಗಿ ಶರಣಪ್ಪ (57) ಅವರು ಶಬರಿಮಲೆ ಸನ್ನಿಧಿಯಲ್ಲಿ ಬುಧವಾರ ಕುಸಿದು ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ.
ಇವರು ಬಂಟ್ವಾಳದ ಕೆಲವರ ತಂಡದ ಜೊತೆಗೂಡಿ ಮಂಗಳವಾರ ಶಬರಿಮಲೆ ಯಾತ್ರೆಗೆ ತೆರಳಿದ್ದು, ಬುಧವಾರ ಮುಂಜಾನೆ ದೇವರ ದರ್ಶನಕ್ಕೆ ತೆರಳಲು ತಯಾರಾಗುತ್ತಿದ್ದ ವೇಳೆ ಸನ್ನಿಧಿಯಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಹೃದಯಾಘಾತದಿಂದ ಈ ಸಾವು ಸಂಭವಿಸಿದೆ ಎಂದು ಶಂಕಿಸಲಾಗಿದೆ.
ಮೃತ ಮುಖ್ಯ ಶಿಕ್ಷಕ ಶಾಲಾ ವಿದ್ಯಾರ್ಥಿಗಳು, ಸಹೋದ್ಯೋಗಿಗಳಿಗಗೆ ಮಾತ್ರವಲ್ಲದೆ, ಇಡೀ ಊರಿನ ನಾಗರಿಕರಿಗೇ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದು, ಮೃತರ ಪಾರ್ಥಿವ ಶರೀರ ಎಲ್ಲಾ ವೈದ್ಯಕೀಯ ಪ್ರಕ್ರಿಯೆ ಮುಗಿಸಿ ಗುರುವಾರ ಮುಂಜಾನೆ ಪಾಟ್ರಕೋಡಿ ತಲುಪಿದ್ದು, ಬುಧವಾರ ರಾತ್ರಿಯಿಂದ ಗುರುವಾರ ಮುಂಜಾನೆವರೆಗೂ ಊರ ನಾಗರಿಕರು ನಿದ್ದೆ ಬಿಟ್ಟು ಕಾದು ನಿಂತು ನೆಚ್ಚಿನ ಶಿಕ್ಷಕನ ಪಾರ್ಥಿನ ಶರೀರ ಅಂತಿಮ ದರ್ಶನ ಪಡೆದ ದೃಶ್ಯ ಕಂಡು ಬಂತು.
0 comments:
Post a Comment