ಬಂಟ್ವಾಳ, ಎಪ್ರಿಲ್ 17, 2025 (ಕರಾವಳಿ ಟೈಮ್ಸ್) : ಲೋಕೋಪಯೋಗಿ ಇಲಾಖೆ ಬಂಟ್ವಾಳ ಉಪವಿಭಾಗದಲ್ಲಿ ಹಲವು ವರ್ಷಗಳ ಕಾಲ ಸಹಾಯಕ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿದ್ದ ಪ್ರೀತಂ ಎನ್ ಅವರು ಪದೋನ್ನತಿಗೊಂಡು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ವರ್ಗಾವಣೆಗೊಂಡಿರುವ ಹಿನ್ನಲೆಯಲ್ಲಿ ಅವರ ಬೀಳ್ಕೊಡುಗೆ ಹಾಗೂ ಗೌರವ ಸನ್ಮಾನ ಕಾರ್ಯಕ್ರಮ ಬಂಟ್ವಾಳ ಲೋಕೋಪಯೋಗಿ ಇಲಾಖಾ ಕಚೇರಿಯಲ್ಲಿ ಬುಧವಾರ ನೆರವೇರಿತು.
ಲೋಕೋಪಯೋಗಿ ಇಲಾಖಾ ಬಂಟ್ವಾಳ ಉಪವಿಭಾಗದ ಎಇಇ ಜೈಪ್ರಕಾಶ್ ಸಿ ಅವರು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಲೋಕೋಪಯೋಗಿ ಇಲಾಖಾ ಪುತ್ತೂರು ಉಪವಿಭಾಗದ ಎಇಇ ರಾಜೇಶ್ ರೈ, ಲೋಕೋಪಯೋಗಿ ಇಲಾಖಾ ಸುಳ್ಯ ಉಪವಿಭಾಗದ ಎಇಇ ಗೋಪಾಲ, ಪಂಚಾಯತ್ ರಾಜ್ ಇಲಾಖಾ ಎಇಇ ತಾರನಾಥ ಅವರು ಭಾಗವಹಿಸಿದ್ದರು. ಬಂಟ್ವಾಳ ಉಪವಿಭಾಗದ ಎಲ್ಲಾ ಸಿಬ್ಬಂದಿಗಳು ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು.
ಲೋಕೋಪಯೋಗಿ ಇಲಾಖಾ ಬಂಟ್ವಾಳ ಉಪವಿಭಾಗದ ಇಂಜಿನಿಯರ್ ಅರುಣ್ ಪ್ರಕಾಶ್ ಡಿ’ಸೋಜ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಇಂಜಿನಿಯರ್ ದಿಲೀಪ್ ವಂದಿಸಿದರು.
0 comments:
Post a Comment