ಬಂಟ್ವಾಳ, ಎಪ್ರಿಲ್ 05, 2025 (ಕರಾವಳಿ ಟೈಮ್ಸ್) : ತುಳು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ರಕ್ತೇಶ್ವರಿ ಯುವಕ ಸಂಘದ ಕಾರ್ಯ ಶ್ಲಾಘನೀಯ. ಕಳೆದ 25 ವರ್ಷಗಳಿಂದ ಗ್ರಾಮೀಣ ಭಾಗದಲ್ಲಿ ನಿರಂತರವಾಗಿ ಸೇವೆಯನ್ನು ನೀಡುತ್ತಾ ಬಂದಿರುವುದು ಸಂತೋಷ ತಂದಿದೆ ಎಂದು ಜೈ ತುಲುನಾಡ್ (ರಿ.) ಸಂಘಟನೆಯ ಪ್ರಧಾನ ಕಾರ್ಯದರ್ಶಿ, ಶಿಕ್ಷಕಿ ಪೂರ್ಣಿಮಾ ಬಂಟ್ವಾಳ ಅವರು ಕೊಂಡಾಡಿದರು.
ನೇರಂಬೋಳು ಶ್ರೀ ರಕ್ತೇಶ್ವರಿ ಯುವಕ ಸಂಘದ ರಜತ ಸಂಭ್ರಮದ ಪ್ರಯುಕ್ತ ನಡೆಯುವ ಎರಡು ದಿನಗಳ ಕಾರ್ಯಕ್ರಮಕ್ಕೆ ಶನಿವಾರ ತುಳುನಾಡ ಬಾವುಟ ಹಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಈ ಸಂದರ್ಭ ಕುಂಜಿರಾ ಗುರುಸ್ವಾಮಿ, ಮಾಜಿ ಯೋಧ ನಾರಾಯಣ, ಗೌರವಾಧ್ಯಕ್ಷ ಮನೋಹರ್ ನೆರಂಬೋಳು, ಸಂಘದ ಅಧ್ಯಕ್ಷ ಹರೀಶ ಕುಲಾಲ್, ಸದಸ್ಯರಾದ ಗೋಪಾಲ ಪೂಜಾರಿ, ಹರಿಶ್ಚಂದ್ರ, ಜನಾರ್ದನ, ಗಣೇಶ, ದಯಾನಂದ, ಯಶೋಧರ, ಗಣೇಶ ಆಚಾರ್ಯ ಮೊದಲಾದವರು ಭಾಗವಹಿಸಿದ್ದರು.
ಬೆಳಿಗ್ಗೆ ಗಣಹೋಮ ನಂತರ ಸತ್ಯನಾರಾಯಣ ಪೂಜೆ ಮದ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ಅಂಗನವಾಡಿ ಮಕ್ಕಳಿಂದ ಮತ್ತು ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
0 comments:
Post a Comment