ಪುತ್ತೂರು, ಎಪ್ರಿಲ್ 12, 2025 (ಕರಾವಳಿ ಟೈಮ್ಸ್) : ಇಬ್ಬರು ಗಾಂಜಾ ಗಿರಾಕಿಗಳನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸಿದ ಘಟನೆ ಸಂಟ್ಯಾರ್ ಶಾಲಾ ಬಳಿ ಶುಕ್ರವಾರ ಸಂಜೆ ನಡೆದಿದೆ.
ಬಂಧಿತ ಗಾಂಜಾ ಗಿರಾಕಿಗಳನ್ನು ಸರ್ವೆ ಗ್ರಾಮದ ಕೂಡುರಸ್ತೆ ನಿವಾಸಿ ಯಾಕೂಬ್ ಎಂಬವರ ಪುತ್ರ ಮಹಮ್ಮದ್ ರಿಝ್ವಾನ್ (24) ಹಾಗೂ ಸಾಲ್ಮರ ಮೌಂಟೇನ್ ವ್ಯೂ ಶಾಲಾ ಬಳಿ ನಿವಾಸಿ ರಫೀಕ್ ಅವರ ಪುತ್ರ ಮಹಮ್ಮದ್ ರಿಫಾಝ್ (21) ಎಂದು ಹೆಸರಿಸಲಾಗಿದೆ.
ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಶುಕ್ರವಾರ ಸಂಜೆ ಇಲಾಖಾ ಜೀಪಿನಲ್ಲಿ ಸಂಚರಿಸುತ್ತಿದ್ದ ವೇಳೆ ಪೊಲೀಸರ ಜೀಪು ಕಂಡು ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ಆರೋಪಿಗಳನ್ನು ಹಿಡಿದು ವಿಚಾರಿಸಿದಾಗ ಅವರು ಅಮಲು ಪದಾರ್ಥ ಸೇವಿಸಿದಂತೆ ಸಂಶಯಗೊಂಡ ಪೊಲೀಸರು ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅಮಲು ಪದಾರ್ಥ ಸೇವಿಸಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಅವರ ವಿರುದ್ದ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
0 comments:
Post a Comment