ಬಂಟ್ವಾಳ, ಎಪ್ರಿಲ್ 08, 2025 (ಕರಾವಳಿ ಟೈಮ್ಸ್) : ಅಟೋ ರಿಕ್ಷಾ ಡಿಕ್ಕಿ ಹೊಡೆದು ಬೈಕ್ ಸವಾರರಿಬ್ಬರು ಗಾಯಗೊಂಡ ಘಟನೆ ಕುಕ್ಕಿಪ್ಪಾಡಿ ಗ್ರಾಮದ ಕುದ್ಕೋಳಿ ನಯರ ಪೆಟ್ರೋಲ್ ಪಂಪ್ ಬಳಿ ಶುಕ್ರವಾರ ಸಂಜೆ ಸಂಭವಿಸಿದ್ದು, ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಗಾಯಗೊಂಡ ಬೈಕ್ ಸವಾರರನ್ನು ಕೊಡಂಬೆಟ್ಟು ನಿವಾಸಿ ಸುಮನ್ (19) ಹಾಗೂ ಅವರ ಸಹೋದರ ಸುಮಂತ್ ಎಂದು ಹೆಸರಿಸಲಾಗಿದೆ. ಇವರಿಬ್ಬರು ಬೈಕಿನಲ್ಲಿ ಬಂಟ್ವಾಳ-ಕುದ್ಕೋಳಿ ಮಾರ್ಗವಾಗಿ ಸಿದ್ದಕಟ್ಟೆ ಕಡೆಯಿಂದ ಬರುತ್ತಾ ಕುಕ್ಕಿಪಾಡಿ ಗ್ರಾಮದ, ಕುದ್ಕೋಳಿ ನಯರ ಪೆಟ್ರೋಲ್ ಪಂಪ್ ಬಳಿ ಪೆಟ್ರೋಲ್ ಹಾಕುವ ಸಲುವಾಗಿ ಮೋಟಾರ್ ಸೈಕಲನ್ನು ಬಲ ಬದಿಯ ಇಂಡಿಕೇಟರ್ ಹಾಕಿ ಪೆಟ್ರೋಲ್ ಪಂಪ್ ಕಡೆಗೆ ತಿರುಗಿಸುತ್ತಿದ್ದ ವೇಳೆ ಹಿಂದುಗಡೆಯಿಂದ ಅಂದರೆ ಸಿದ್ದಕಟ್ಟೆ ಕಡೆಯಿಂದ ಕುದ್ಕೋಳಿ ಕಡೆಗೆ ಬರುತ್ತಿದ್ದ ಆಟೋ ರಿಕ್ಷಾ ಚಾಲಕ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಬೈಕನ್ನು ಓವರ್ ಟೇಕ್ ಮಾಡಿಕೊಂಡು ಬಂದು ಬೈಕಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದಿಂದ ಸವಾರರಿಬ್ಬರು ಬೈಕ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment