ಬೆಳ್ತಂಗಡಿ, ಎಪ್ರಿಲ್ 11, 2025 (ಕರಾವಳಿ ಟೈಮ್ಸ್) : ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಬಳಿ ಬೈಕಿನಲ್ಲಿ ಬಂದ ಅಪರಿಚಿತರು ಕುತ್ತಿಗೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಕರಿಮಣಿ ಸರ ಎಗರಿಸಿದ ಘಟನೆ ಉಜಿರೆ ಗ್ರಾಮದ ಓಡಲ ವ್ಯಾಘ್ರ ಚಾಮುಂಡಿ ದ್ವಾರದ ಬಳಿ ಗುರುವಾರ ಮುಂಜಾನೆ ಸಂಭವಿಸಿದೆ.
ಉಜಿರೆ ಗ್ರಾಮದ ಕಿರಿಯಾಡಿ ನಿವಾಸಿ ಕೂಸಪ್ಪ ಗೌಡ ಅವರ ಪತ್ನಿ ಶ್ರೀಮತಿ ರತ್ನ (55) ಎಂಬವರೇ ಕರಿಮಣಿ ಸರ ಕಳೆದುಕೊಂಡ ಮಹಿಳೆ. ಇವರು ಗುರುವಾರ ಬೆಳಿಗ್ಗೆ ಸುಮಾರು 6.15 ಗಂಟೆಗೆ ಕೆಲಸಕ್ಕೆ ಹೊರಟು ಉಜಿರೆ ಗ್ರಾಮದ ಓಡಲ ವ್ಯಾಘ್ರ ಚಾಮುಂಡಿ ದ್ವಾರದ ಬಳಿಸ್ವಲ್ಪ ಮುಂದಕ್ಕೆ ನಡೆದುಕೊಂಡು ಹೋಗುತ್ತಿರುವ ಸಮಯ ಬೆಳಿಗ್ಗೆ ಸುಮಾರು 6.30 ರವೇಳೆಗೆ ಹಿಂಬದಿಯಿಂದ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು, ಬೈಕನ್ನು ಚಾಲೂ ಸ್ಥಿತಿಯಲ್ಲಿ ನಿಲ್ಲಿಸಿ ಹಿಂಬದಿ ಸವಾರ ಬೈಕಿಂದ ಇಳಿದು ಮಹಿಳೆಯ ಬಳಿ ಬಂದು ಕುತ್ತಿಗೆಯಲ್ಲಿದ್ದ ಅಂದಾಜು 33 ಗ್ರಾಂ ತೂಕದ ಸುಮಾರು 1.49 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಕರಿಮಣಿ ಸರವನ್ನು ಎಳೆದುಕೊಂಡು ಪರಾರಿಯಾಗಿದ್ದಾರೆ. ಚಿನ್ನದ ಕರಿಮಣಿ ಸರವನ್ನು ಆರೋಪಿಗಳು ಕುತ್ತಿಗೆಯಿಂದ ರಭಸವಾಗಿ ಎಳೆಯುವ ವೇಳೆ ಮಹಿಳೆಯ ಕುತ್ತಿಗೆಗೆ ಗಾಯವಾಗಿರುತ್ತದೆ. ಈ ಬಗ್ಗೆ ಬೆಳ್ತಂಗಡಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment