ಬಂಟ್ವಾಳ, ಎಪ್ರಿಲ್ 15, 2025 (ಕರಾವಳಿ ಟೈಮ್ಸ್) : ಗೂಡ್ಸ್ ಟೆಂಪೋ ವಾಹನ ಡಿಕ್ಕಿಯಾಗಿ ದ್ವಿಚಕ್ರ ಸವಾರರಾದ ಪತಿ-ಪತ್ನಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಕಣಿಯೂರು-ಕರೋಪಾಡಿ ರಸ್ತೆಯ ಕಣಿಯೂರು ಜಂಕನ್ನಿನಲ್ಲಿ ಸಂಭವಿಸಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಯಗೊಂಡ ದ್ವಿಚಕ್ರ ಸವಾರರನ್ನು ನಾರಾಯಣ ನಾಯ್ಕ ಹಾಗೂ ಅವರ ಪತ್ನಿ ಗೀತಾ ಎಂದು ಹೆಸರಿಸಲಾಗಿದೆ. ಪತಿ-ಪತ್ನಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಕಣಿಯೂರು ಕಡೆಯಿಂದ ಕರೋಪಾಡಿ ಕಡೆಗೆ ಧಾವಿಸಿ ಬಂದ ಗೂಡ್ಸ್ ಟೆಂಪೋ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಘಟನೆಯಿಂದ ಗಾಯಗೊಂಡ ಪತಿ-ಪತ್ನಿಯನ್ನು ವಿಟ್ಲ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿದೆ.
0 comments:
Post a Comment