ಬೆಳ್ತಂಗಡಿ, ಎಪ್ರಿಲ್ 11, 2025 (ಕರಾವಳಿ ಟೈಮ್ಸ್) : ಮನೆ ಮಂದಿ ಸಂಬಂಧಿಕರ ಮನೆಗೆ ಮನೆಗೆ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಹಾಡಹಗಲೇ ಒಳ ನುಗ್ಗಿದ ಕಳ್ಳರು ಸಾವಿರಾರು ರೂಪಾಯಿ ನಗದು ಹಾಗೂ ಚಿನ್ನಾಭರಣ ದೋಚಿದ ಘಟನೆ ಕಣಿಯೂರು ಗ್ರಾಮದ ಯಂತ್ರಡ್ಕ ಎಂಬಲ್ಲಿ ಗುರುವಾರ ಸಂಭವಿಸಿದೆ.
ಇಲ್ಲಿನ ನಿವಾಸಿ ಅಬೂಬ್ಬಕ್ಕರ್ ಸಿದ್ದಿಕ್ (28) ಎಂಬವರ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದೆ. ಇವರು ಗುರುವಾರ ಮೂಡಬಿದ್ರೆಯಲ್ಲಿ ಸಂಬಂಧಿಕರ ಮದುವೆ ಕಾರ್ಯಕ್ರಮ ಇದ್ದುದರಿಂದ ಬೆಳಿಗ್ಗೆ 10 ಗಂಟೆಗೆ ಮನೆಗೆ ಬೀಗ ಹಾಕಿ ಮನೆ ಮಂದಿ ಜೊತೆ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದು, ಸಂಜೆ ಕಾರ್ಯಕ್ರಮ ಮುಗಿಸಿ ಮನೆಗೆ ಬಂದು ಮನೆಯ ಬೀಗ ತೆರೆದು ಒಳಗೆ ಹೋಗಿ ನೋಡಿದಾಗ ಮನೆಯೊಳಗಿದ್ದ ಕಪಾಟು ತೆರೆದುಕೊಂಡಿದ್ದು, ಯಾರೋ ಕಳ್ಳರು ಮನೆಯ ಮೇಲ್ಛಾವಣಿಯ ಹಂಚು ತೆಗೆದು ಒಳಗೆ ಪ್ರವೇಶಿಸಿ ಮನೆಯ ಮಲಗುವ ಕೊಠಡಿಯಲ್ಲಿ ಇರಿಸಿದ್ದ ಸ್ಟೀಲ್ ಕಪಾಟಿನ ಬೀಗಮುರಿದು ಕಪಾಟಿನೊಳಗಿದ್ದ 58 ಸಾವಿರ ರೂಪಾಯಿ ನಗದು ಹಣ ಹಾಗೂ 2 ಪವನ್ ಇರುವ ಕಿವಿಯ ಚಿನ್ನ ಕಳವುಗೈದಿದ್ದಾರೆ. ಚಿನ್ನದ ಅಂದಾಜು ಮೌಲ್ಯ ಸುಮಾರು 70 ಸಾವಿರ ರೂಪಾಯಿಗಳು. ಕಳವಾದ ಸೊತ್ತುಗಳ ಒಟ್ಟು ಮೌಲ್ಯ 1.28 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment