ಫರಂಗಿಪೇಟೆ ಬಟ್ಟೆ ಅಂಗಡಿಗೆ ನುಗ್ಗಿ ನಗದು ಕಳವು ಪ್ರಕರಣ ಬೇಧಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸ್ : ನಗದು ಸಹಿತ ಆರೋಪಿ ದಸ್ತಗಿರಿ - Karavali Times ಫರಂಗಿಪೇಟೆ ಬಟ್ಟೆ ಅಂಗಡಿಗೆ ನುಗ್ಗಿ ನಗದು ಕಳವು ಪ್ರಕರಣ ಬೇಧಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸ್ : ನಗದು ಸಹಿತ ಆರೋಪಿ ದಸ್ತಗಿರಿ - Karavali Times

728x90

19 April 2025

ಫರಂಗಿಪೇಟೆ ಬಟ್ಟೆ ಅಂಗಡಿಗೆ ನುಗ್ಗಿ ನಗದು ಕಳವು ಪ್ರಕರಣ ಬೇಧಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸ್ : ನಗದು ಸಹಿತ ಆರೋಪಿ ದಸ್ತಗಿರಿ

 ಬಂಟ್ವಾಳ, ಎಪ್ರಿಲ್ 19, 2025 (ಕರಾವಳಿ ಟೈಮ್ಸ್) : ಫರಂಗಿಪೇಟೆ ಜಂಕ್ಷನ್ನಿನಲ್ಲಿನ ಬಟ್ಟೆ ಅಂಗಡಿಗೆ ನುಗ್ಗಿ ಲಕ್ಷಾಂತರ ರೂಪಾಯಿ ನಗದು ಹಣವನ್ನು ಎಗರಿಸಿದ ಪ್ರಕರಣ ಬೇಧಿಸಿದ ಬಂಟ್ವಾಳ ಗ್ರಾಮಾಂತ ಠಾಣಾ ಪೊಲೀಸರು ನಗದು ಸಹಿತ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಅಡ್ಯಾರ್-ಕಣ್ಣೂರು ನಿವಾಸಿ ನಝೀರ್‌ ಮಹಮ್ಮದ್‌ (26) ಎಂದು ಹೆಸರಿಸಲಾಗಿದೆ.

 ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪುದು ಗ್ರಾಮದ ಪರಂಗಿಪೇಟೆ ಜಂಕ್ಷನ್ನಿನಲ್ಲಿರುವ  ವಿಶ್ವಾಸ ಸಿಟಿ ಸೆಂಟರ್ ನ ವೈಟ್  ಲೈನ್ ಕಿಡ್ಸ್ ವರ್ಲ್ಡ್ ಬಟ್ಟೆ ಅಂಗಡಿಗೆ  ಎಪ್ರಿಲ್ 11 ರಂದು ರಾತ್ರಿ ನುಗ್ಗಿ ಕ್ಯಾಶ್ ಕೌಂಟರ್ ನಲ್ಲಿದ್ದ ನಗದನ್ನು ಕಳವುಗೈಯಲಾದ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸದ್ರಿ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿ ನಝೀರ್‌ ಮಹಮ್ಮದ್‌ ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ ಕಳವುಗೈದ ನಗದು ಹಣದ  ಪೈಕಿ 1,09,490/- ರೂಪಾಯಿ ನಗದು ಹಣ ಹಾಗೂ ಕೃತ್ಯಕ್ಕೆ ಬಳಸಿದ ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

       ಆರೋಪಿ ನಝೀರ್‌ ಮಹಮ್ಮದ್‌ ಎಂಬಾತ ಈಗಾಗಲೇ  2024ನೇ ವರ್ಷದಲ್ಲಿ  ಕಂಕನಾಡಿ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಕಣ್ಣೂರು ಟಿವಿಎಸ್‌ ಶೋರೂಂ ಗಾಜು ಒಡೆದು ಹಣ ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಆರೋಪಿಯಾಗಿದ್ದಾನೆ.

   ಬಂಟ್ವಾಳ‌ ಗ್ರಾಮಾಂತರ ಪೊಲೀಸ್‌ ಠಾಣಾ  ಪೊಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ ಬಿ ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಫರಂಗಿಪೇಟೆಯ ವಿಶ್ವಾಸ ಸಿಟಿ ಸೆಂಟರಿನ ಮಂಗಳೂರು ತಾಲೂಕು, ಅಡ್ಯಾರ್-ಕಣ್ಣೂರು ಸಮೀಪದ ಕುಂಡಾಲು ನಿವಾಸಿ ಡಿ ಮುಹಮ್ಮದ್ ಅವರ ಪುತ್ರ ಇರ್ಫಾನ್ ಅವರಿಗೆ ಸೇರಿದ ವೈಟ್ ಲೈನ್ ಕಿಡ್ಸ್ ವಲ್ರ್ಡ್ ಬಟ್ಟೆ ಅಂಗಡಿಯಲ್ಲಿ ಎಪ್ರಿಲ್ 11 ರಂದು ಶುಕ್ರವಾರ ರಾತ್ರಿ ಈ ಕಳವು ಕೃತ್ಯ ನಡೆದಿದ್ದು, ಶನಿವಾರ ಬೆಳಿಗ್ಗೆ ಬಂದಿತ್ತು.

ಅಂಗಡಿಯ ಸೀಸಿ ಕ್ಯಾಮೆರಾದ ಕೇಬಲ್ ಕಟ್ ಮಾಡಿ ಒಳನುಗ್ಗಿದ ಆರೋಪಿ ಕ್ಯಾಶ್ ಕೌಂಟರಿನ ಒಳಗಿದ್ದ 4 ಲಕ್ಷ ರೂಪಾಯಿ ಹಣವನ್ನು ಕಳವುಗೈದು ಪರಾರಿಯಾಗಿದ್ದ.

  • Blogger Comments
  • Facebook Comments

0 comments:

Post a Comment

Item Reviewed: ಫರಂಗಿಪೇಟೆ ಬಟ್ಟೆ ಅಂಗಡಿಗೆ ನುಗ್ಗಿ ನಗದು ಕಳವು ಪ್ರಕರಣ ಬೇಧಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸ್ : ನಗದು ಸಹಿತ ಆರೋಪಿ ದಸ್ತಗಿರಿ Rating: 5 Reviewed By: lk
Scroll to Top