ಬಂಟ್ವಾಳ, ಎಪ್ರಿಲ್ 05, 2025 (ಕರಾವಳಿ ಟೈಮ್ಸ್) : ಸ್ಕೂಟರ್ ಸವಾರನ ನಿಯಂತ್ರಣ ಮೀರಿ ಹೆದ್ದಾರಿ ದಾಟುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದ ಪರಿಣಾಮ ಪಾದಚಾರಿ ಮಹಿಳೆ ಹಾಗೂ ಸ್ಕೂಟರ್ ಸಹಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಪುದು ಗ್ರಾಮದ ಫರಂಗಿಪೇಟೆ ಎಂಬಲ್ಲಿ ಶುಕ್ರವಾರ ಸಂಭವಿಸಿದೆ.
ಗಾಯಾಳು ಪಾದಚಾರಿ ಮಹಿಳೆಯನ್ನು ವೆರೋನಿಕಾ ಹಾಗೂ ಸ್ಕೂಟರ್ ಸಹಸವಾರನನ್ನು ಆಶಿಫ್ ಎಂದು ಹೆಸರಿಸಲಾಗಿದೆ.
ಆಶಿಫ್ ತನ್ನ ಸ್ನೇಹಿತ ಸಾಬಿತ್ ಎಂಬಾತನ ಸ್ಕೂಟರಿನಲ್ಲಿ ಮಾರಿಪಳ್ಳದಿಂದ ಮಂಗಳೂರು ಕಡೆ ತೆರಳುತ್ತಿದ್ದ ವೇಳೆ ಫರಂಗಿಪೇಟೆ ರಾಧಾ ನರ್ಸಿಂಗ್ ಹೋಂ ಬಳಿ ಸ್ಕೂಟರ್ ಸವಾರನ ನಿಯಂತ್ರಣ ಮೀರಿ ಹೆದ್ದಾರಿ ದಾಟುತ್ತಿದ್ದ ವೆರೋನಿಕಾ ಎಂಬ ಮಹಿಳೆಗೆ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಸ್ಕೂಟರ್ ಹಾಗೂ ಮಹಿಳೆ ರಸ್ತೆಗೆ ಬಿದ್ದಿದ್ದು, ಮಹಿಳೆಯ ಕಾಲಿಗೆ ಹಾಗೂ ಮುಖಕ್ಕೆ ಗಾಯವಾಗಿದ್ದರೆ, ಆಶಿಫನ ಭುಜಕ್ಕೆ ಗಾಯವಾಗಿದೆ. ಗಾಯಾಳುಗಳನ್ನು ಅಡ್ಯಾರ್ ಜನಪ್ರಿಯ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಗಾಯಾಳು ಆಶಿಫನ ತಂದೆ ಇಬ್ರಾಹಿಂ ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment