ಬಂಟ್ವಾಳ, ಎಪ್ರಿಲ್ 11, 2025 (ಕರಾವಳಿ ಟೈಮ್ಸ್) : ಮನೆಯ ದಾರಿಗೆ ಅಡ್ಡಲಾಗಿ ಬೇಲಿ ಹಾಕುತ್ತಿದ್ದ ಬಗ್ಗೆ ಪ್ರಶ್ನಿಸಿದ ಮಹಿಳೆಗೆ ನೆರೆ ಮನೆ ಮಂದಿ ಹಲ್ಲೆ ನಡೆಸಿದ ಘಟನೆ ದೇವಸ್ಯಪಡೂರು ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ನಡೆದಿದ್ದು, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಲ್ಲಿನ ನಿವಾಸಿ ಲೋಕೇಶ್ ನಾಯ್ಕ್ ಅವರ ಪತ್ನಿ ಶೃತಿ (34) ಎಂಬವರೇ ಹಲ್ಲೆಗೊಳಗಾದ ಮಹಿಳೆ. ಇವರು ಬುಧವಾರ ಮಧ್ಯಾಹ್ನ ತಮ್ಮ ಜಾಗದ ಪಕ್ಕದಲ್ಲಿದ್ದ ದನವನ್ನು ಕಟ್ಟಲು ಹೋಗಿದ್ದಾಗ ಆರೋಪಿಗಳಾದ ಶ್ರೀಮತಿ ರೇಖಾ, ಅವರ ಅಕ್ಕನ ಮಗ ಮತ್ತು ಮಗಳು ಹಾಗೂ ಇತರರು ಶೃತಿ ಅವರ ಮನೆಗೆ ಬರುವ ದಾರಿಗೆ ಅಡ್ಡಲಾಗಿ ಬೇಲಿ ನಿರ್ಮಿಸಿರುವುದನ್ನು ಕಂಡು ಅವರ ಬಳಿ ಹೋಗಿ ‘ಯಾಕೆ ನಮ್ಮ ಜಾಗದಲ್ಲಿ ಬೇಲಿ ಹಾಕುತ್ತಿದ್ದೀರಿ’ ಎಂದು ಕೇಳಿದಾಗ ಆರೋಪಿಗಳು ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment