ಬೆಳ್ತಂಗಡಿ, ಎಪ್ರಿಲ್ 11, 2025 (ಕರಾವಳಿ ಟೈಮ್ಸ್) : ಅಂಗಡಿ ಪಕ್ಕದಲ್ಲಿ ನಿಲ್ಲಿಸಿದ್ದ ಕಾರು ಕಳವಾಗಿರುವ ಘಟನೆ ಉಜಿರೆ ಕಾಲೇಜು ರಸ್ತೆಯಲ್ಲಿ ನಡೆದಿದ್ದು, ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಜಿರೆ ಕಾಲೇಜಿ ರಸ್ತೆಯ ಗೌಸಿಯಾ ಮಂಝಿಲ್ ನಿವಾಸಿ ಅಬ್ದುಲ್ ಮುತ್ತಲಿಬ್ (41) ಅವರು ಕಳೆದ ಮಾರ್ಚ್ 29 ರಂದು ತನ್ನ ಆಲ್ಟೋ ಕಾರನ್ನು ಉಜಿರೆ ಗ್ರಾಮದ ಉಜಿರೆ ಕಾಲೇಜು ರಸ್ತೆ ಪಾರ್ಕಿಂಗ್ ಇರುವ ತನ್ನ ಅಂಗಡಿ ಪಕ್ಕದಲ್ಲಿ ನಿಲ್ಲಿಸಿ, ಅಂಗಡಿಯಲ್ಲಿ ವ್ಯಾಪಾರ ಮುಗಿಸಿ ರಾತ್ರಿ ಸುಮಾರು 10 ಗಂಟೆಗೆ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ ಕಾರಿನ ಬಳಿ ಬಂದಾಗ ಕಾರು ಕಾಣೆಯಾಗಿರುತ್ತದೆ. ಕಳವಾಗಿರುವ ಕಾರಿನ ಅಂದಾಜು ಮೌಲ್ಯ 6.50 ಲಕ್ಷ ರೂಪಾಯಿಗಳಾಗಿವೆ. ಪರಿಸರದಲ್ಲಿ ಹುಡಕಾಡಿದರೂ ಕಾರಿನ ಸುಳಿವು ದೊರಕದ ಹಿನ್ನಲೆಯಲ್ಲಿ ಬೆಳ್ತಂಗಡಿ ಪೆÇಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಲಾಗಿದೆ.
0 comments:
Post a Comment