ಎಪ್ರಿಲ್ 15 ರಿಂದ 17ರವರೆಗೆ ನಡೆಯುವ ಯುಜಿಸಿಇಟಿ-2025 ಪರೀಕ್ಷಾ ಹಾಲ್ ಟಿಕೆಟ್ ಬಿಡುಗಡೆ : ಕೆಇಎ ವೆಬ್ ಸೈಟ್ ಮೂಲಕ ಡೌನ್ ಲೋಡ್ ಮಾಡಿಕೊಳ್ಳಲು ಅಭ್ಯರ್ಥಿಗಳಿಗೆ ಸೂಚನೆ, ಪ್ರಥಮ ಬಾರಿಗೆ ಹಾಲ್ ಟಿಕೆಟಿನಲ್ಲಿ ಕ್ಯೂಆರ್ ಕೋಡ್ ಬಳಕೆ, ಮಾದರಿ ಒಎಂಆರ್ ಶೀಟ್ ಲಭ್ಯ - Karavali Times ಎಪ್ರಿಲ್ 15 ರಿಂದ 17ರವರೆಗೆ ನಡೆಯುವ ಯುಜಿಸಿಇಟಿ-2025 ಪರೀಕ್ಷಾ ಹಾಲ್ ಟಿಕೆಟ್ ಬಿಡುಗಡೆ : ಕೆಇಎ ವೆಬ್ ಸೈಟ್ ಮೂಲಕ ಡೌನ್ ಲೋಡ್ ಮಾಡಿಕೊಳ್ಳಲು ಅಭ್ಯರ್ಥಿಗಳಿಗೆ ಸೂಚನೆ, ಪ್ರಥಮ ಬಾರಿಗೆ ಹಾಲ್ ಟಿಕೆಟಿನಲ್ಲಿ ಕ್ಯೂಆರ್ ಕೋಡ್ ಬಳಕೆ, ಮಾದರಿ ಒಎಂಆರ್ ಶೀಟ್ ಲಭ್ಯ - Karavali Times

728x90

7 April 2025

ಎಪ್ರಿಲ್ 15 ರಿಂದ 17ರವರೆಗೆ ನಡೆಯುವ ಯುಜಿಸಿಇಟಿ-2025 ಪರೀಕ್ಷಾ ಹಾಲ್ ಟಿಕೆಟ್ ಬಿಡುಗಡೆ : ಕೆಇಎ ವೆಬ್ ಸೈಟ್ ಮೂಲಕ ಡೌನ್ ಲೋಡ್ ಮಾಡಿಕೊಳ್ಳಲು ಅಭ್ಯರ್ಥಿಗಳಿಗೆ ಸೂಚನೆ, ಪ್ರಥಮ ಬಾರಿಗೆ ಹಾಲ್ ಟಿಕೆಟಿನಲ್ಲಿ ಕ್ಯೂಆರ್ ಕೋಡ್ ಬಳಕೆ, ಮಾದರಿ ಒಎಂಆರ್ ಶೀಟ್ ಲಭ್ಯ

ಬೆಂಗಳೂರು, ಎಪ್ರಿಲ್ 07, 2025 (ಕರಾವಳಿ ಟೈಮ್ಸ್) : ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಎಪ್ರಿಲ್ 15 ರಿಂದ 17ರವರೆಗೆ ನಡೆಸುವ 2025ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯ (ಯುಜಿಸಿಇಟಿ-2025) ಹಾಲ್ ಟಿಕೆಟ್ ಬಿಡುಗಡೆ ಮಾಡಿದ್ದು, ಪರೀಕ್ಷಾ ಪ್ರಾಧಿಕಾರದ ವೆಬ್ ಸೈಟ್ ಮೂಲಕ ಡೌನ್ ಲೋಡ್ ಮಾಡಿಕೊಳ್ಳುವಂತೆ ಅಭ್ಯರ್ಥಿಗಳಿಗೆ ಸೂಚಿಸಿದೆ. 

ಅಭ್ಯರ್ಥಿಗಳು, ಕೆಇಎ ವೆಬ್ ಸೈಟ್ ನಲ್ಲಿ ಯುಜಿಸಿಇಟಿ-25 ಪ್ರವೇಶ ಪತ್ರ ಎನ್ನುವ ಲಿಂಕ್ ಮೇಲೆ ಕ್ಲಿಕ್ ಮಾಡಿ ತಮ್ಮ ಲಾಗಿನ್ ಐಡಿ ಸಂಖ್ಯೆ, ಪಾಸ್ ವರ್ಡ್ ದಾಖಲಿಸುವುದರ ಮೂಲಕ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್ ಪ್ರಸನ್ನ ಅವರು ತಿಳಿಸಿದ್ದಾರೆ. 

ಇದೇ ಮೊದಲ ಬಾರಿಗೆ ಒಟಿಪಿ ಮತ್ತು ಮುಖ ಚಹರೆ ಆಧಾರಿತ ಲಾಗಿನ್ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ಈ ಬಾರಿಯ ಹಾಲ್ ಟಿಕೆಟಿನಲ್ಲಿ ಕ್ಯೂ-ಆರ್ ಕೋಡ್ ಇದೆ. ಜತೆಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಮಾದರಿ ಓ ಎಂ ಆರ್ ಶೀಟ್ ಹಾಗೂ ಮಾರ್ಗಸೂಚಿ ಪಟ್ಟಿಗಳನ್ನೊಳಗೊಂಡ ಹೆಚ್ಚುವರಿ ಎರಡು ಪುಟಗಳಿದ್ದು ಅವುಗಳನ್ನು ಡೌನ್‍ಲೋಡ್ ಮಾಡಿಕೊಂಡು ಓದಿಕೊಳ್ಳಬೇಕು. ಮಾದರಿ ಓ ಎಂ ಆರ್ ಶೀಟ್ ಅನ್ನೂ ವಿದ್ಯಾರ್ಥಿಗಳು ಅಭ್ಯಾಸಕ್ಕೆ ಬಳಸಬೇಕು. ಆ ಮೂಲಕ ಪರೀಕ್ಷೆ ಸಂದರ್ಭದಲ್ಲಿ ಆಗುವ ತಪ್ಪುಗಳನ್ನು ತಪ್ಪಿಸಬಹುದು ಎಂದವರು ಸಲಹೆ ನೀಡಿದ್ದಾರೆ. 

ಈ ಬಾರಿ ಎಂಜಿನಿಯರಿಂಗ್ ಸೇರಿದಂತೆ ಕೆಇಎ ನಡೆಸುವ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶ ಪರೀಕ್ಷೆಗೆ ಒಟ್ಟು 3,30,875 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಎಪ್ರಿಲ್ 15 ರಿಂದ 17ರವರೆಗೆ ನಡೆಯುವ ಯುಜಿಸಿಇಟಿ-2025 ಪರೀಕ್ಷಾ ಹಾಲ್ ಟಿಕೆಟ್ ಬಿಡುಗಡೆ : ಕೆಇಎ ವೆಬ್ ಸೈಟ್ ಮೂಲಕ ಡೌನ್ ಲೋಡ್ ಮಾಡಿಕೊಳ್ಳಲು ಅಭ್ಯರ್ಥಿಗಳಿಗೆ ಸೂಚನೆ, ಪ್ರಥಮ ಬಾರಿಗೆ ಹಾಲ್ ಟಿಕೆಟಿನಲ್ಲಿ ಕ್ಯೂಆರ್ ಕೋಡ್ ಬಳಕೆ, ಮಾದರಿ ಒಎಂಆರ್ ಶೀಟ್ ಲಭ್ಯ Rating: 5 Reviewed By: karavali Times
Scroll to Top