ಬಂಟ್ವಾಳ, ಎಪ್ರಿಲ್ 05, 2025 (ಕರಾವಳಿ ಟೈಮ್ಸ್) : ಬಸ್ಸು ಡಿಕ್ಕಿ ಹೊಡೆದು ಅಟೋ ರಿಕ್ಷಾ ಮಗುಚಿ ಬಿದ್ದ ಪರಿಣಾಮ ಚಾಲಕ ಹಾಗೂ ಇಬ್ಬರು ಮಹಿಳಾ ಪ್ರಯಾಣಿಕರು ಗಾಯಗೊಂಡ ಘಟನೆ ಕಳ್ಳಿಗೆ ಗ್ರಾಮದ ಬ್ರಹ್ಮಕೂಟ್ಲು ಸೇತುವೆ ಬಳಿ ಶುಕ್ರವಾರ ಅಪರಾಹ್ನ ಸಂಭವಿಸಿದೆ.
ಗಾಯಾಳುಗಳನ್ನು ಅಟೋ ಚಾಲಕ, ಬಿ ಮೂಡ ನಿವಾಸಿ ಮೊಹಮ್ಮದ್ ಫರಾಜ್ (27), ಮಹಿಳಾ ಪ್ರಯಾಣಿಕರಾದ ಮೈಮೂನಾ (54) ಹಾಗೂ ಆಯಿಷಾ ನಜ್ಮಾ (26) ಎಂದು ಹೆಸರಿಸಲಾಗಿದೆ.
ಫರಾಜ್ ತನ್ನ ಅಟೋ ರಿಕ್ಷಾದಲ್ಲಿ ಶುಕ್ರವಾರ ಅಪರಾಹ್ನ 3 ಗಂಟೆ ವೇಳೆಗೆ ಮೊಡಂಕಾಪು ಕಡೆಯಿಂದ ತುಂಬೆ ಕಡೆಗೆ ಇಬ್ಬರು ಮಹಿಳೆಯನ್ನು ಬಾಡಿಗೆ ನೆಲೆಯಲ್ಲಿ ಕರೆದುಕೊಂಡು ಹೋಗುತ್ತಿದ್ದ ವೇಳೆ ಬ್ರಹ್ಮರಕೂಟ್ಲು ಸೇತುವೆ ಬಳಿ ಮಂಗಳೂರು ಕಡೆಯಿಂದ ಬಂದ ಬಸ್ಸು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಅಟೋ ರಿಕ್ಷಾ ರಸ್ತೆಯಲ್ಲಿ ಮಗುಚಿ ಬಿದ್ದಿದ್ದು, ಚಾಲಕ ಸಹಿತ ಇಬ್ಬರು ಪ್ರಯಾಣಿಕರು ಕೂಡಾ ಗಾಯಗೊಂಡಿದ್ದಾರೆ. ಗಾಯಾಳು ಚಾಲಕ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಾದರೆ, ಮಹಿಳಾ ಪ್ರಯಾಣಿಕರು ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment