ಬೆಳ್ತಂಗಡಿ : ಮಧ್ಯರಾತ್ರಿ ಬೈಕ್ ಮರಕ್ಕೆ ಡಿಕ್ಕಿ ಹೊಡೆದು ಸವಾರರಿಬ್ಬರು ಸ್ಪಾಟ್ ಡೆತ್ - Karavali Times ಬೆಳ್ತಂಗಡಿ : ಮಧ್ಯರಾತ್ರಿ ಬೈಕ್ ಮರಕ್ಕೆ ಡಿಕ್ಕಿ ಹೊಡೆದು ಸವಾರರಿಬ್ಬರು ಸ್ಪಾಟ್ ಡೆತ್ - Karavali Times

728x90

12 April 2025

ಬೆಳ್ತಂಗಡಿ : ಮಧ್ಯರಾತ್ರಿ ಬೈಕ್ ಮರಕ್ಕೆ ಡಿಕ್ಕಿ ಹೊಡೆದು ಸವಾರರಿಬ್ಬರು ಸ್ಪಾಟ್ ಡೆತ್

ಬೆಳ್ತಂಗಡಿ, ಎಪ್ರಿಲ್ 12, 2025 (ಕರಾವಳಿ ಟೈಮ್ಸ್) : ಬೈಕೊಂದು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಕುತ್ಲೂರು ಗ್ರಾಮದ ಪುರುಷಗುಡ್ಡೆ ಎಂಬಲ್ಲಿ ಕೊಕ್ರಾಡಿ-ನಾರಾವಿ ರಸ್ತೆಯಲ್ಲಿ ಶುಕ್ರವಾರ ಮಧ್ಯ ರಾತ್ರಿ ವೇಳೆಗೆ ಸಂಭವಿಸಿದೆ. 

ಮೃತರನ್ನು ಬೈಕ್ ಸವಾರ, ಸ್ಥಳೀಯ ನಿವಾಸಿ ಪ್ರಶಾಂತ್ ಹಾಗೂ ಸಹಸವಾರ, ಬೆಳ್ಮಣ್ ನಿವಾಸಿ ದಿನೇಶ್ ಎಂದು ಹೆಸರಿಸಲಾಗಿದೆ. ಶುಕ್ರವಾರ ರಾತ್ರಿ ಸುಮಾರು 12.15 ರ ವೇಳೆಗೆ ಕೊಕ್ರಾಡಿ-ನಾರಾವಿ ರಸ್ತೆಯಲ್ಲಿ ಬರುತ್ತಿದ್ದ ಇವರು ನಿಯಂತ್ರಣ ಮೀರಿ ರಸ್ತೆಯ ಬಲಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಇಬ್ಬರು ಸವಾರರು ಕೂಡಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸೂರ್ಯ ಎಂಬವರು ನೀಡಿದ ದೂರಿನಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬೆಳ್ತಂಗಡಿ : ಮಧ್ಯರಾತ್ರಿ ಬೈಕ್ ಮರಕ್ಕೆ ಡಿಕ್ಕಿ ಹೊಡೆದು ಸವಾರರಿಬ್ಬರು ಸ್ಪಾಟ್ ಡೆತ್ Rating: 5 Reviewed By: karavali Times
Scroll to Top