ಅಂಬೇಡ್ಕರ್ ಅವರ ದಿಟ್ಟತನದಿಂದ ಇಂದು ದೇಶದ ಕೋಟ್ಯಂತರ ಜನ ನಿಟ್ಟುಸಿರಿನ ಜೀವನ ನಡೆಸುವಂತಾಗಿದೆ : ರಮಾನಾಥ ರೈ ಬಣ್ಣನೆ - Karavali Times ಅಂಬೇಡ್ಕರ್ ಅವರ ದಿಟ್ಟತನದಿಂದ ಇಂದು ದೇಶದ ಕೋಟ್ಯಂತರ ಜನ ನಿಟ್ಟುಸಿರಿನ ಜೀವನ ನಡೆಸುವಂತಾಗಿದೆ : ರಮಾನಾಥ ರೈ ಬಣ್ಣನೆ - Karavali Times

728x90

14 April 2025

ಅಂಬೇಡ್ಕರ್ ಅವರ ದಿಟ್ಟತನದಿಂದ ಇಂದು ದೇಶದ ಕೋಟ್ಯಂತರ ಜನ ನಿಟ್ಟುಸಿರಿನ ಜೀವನ ನಡೆಸುವಂತಾಗಿದೆ : ರಮಾನಾಥ ರೈ ಬಣ್ಣನೆ

ಮಂಗಳೂರು, ಎಪ್ರಿಲ್ 14, 2025 (ಕರಾವಳಿ ಟೈಮ್ಸ್) : ಸಾಮಾಜಿಕ ನ್ಯಾಯ, ಜಾತ್ಯಾತೀತತೆ, ಭಾತೃತ್ವವನ್ನು ಯಾರು ವಿರೋಧಿಸುತ್ತಾರೋ ಅವರೆಲ್ಲರೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಂದ ರಚನೆಗೊಂಡಿರುವ ಸಂವಿಧಾನವನ್ನೂ ವಿರೋಧಿಸುವವರಾಗಿದ್ದಾರೆ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ ರಮಾನಾಥ ರೈ ಹೇಳಿದರು. 

ಸಂವಿಧಾನದ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆ ಅಂಗವಾಗಿ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸೋಮವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಬಾಬಾ ಸಾಹೇಬರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ನ್ಯಾಯ ಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ, ಸಮಾಜ ಸುಧಾರಕರಾಗಿದ್ದ ಅಂಬೇಡ್ಕರ್ ಅವರು ಜೀವನದ ಉದ್ದಕ್ಕೂ ಸಬಲೀಕರಣಕ್ಕೆ ಒತ್ತು ನೀಡಿದ್ದಾರೆ.  ಸಾಮಾಜಿಕ ನ್ಯಾಯದಿಂದ ವಂಚಿತರಾದ ದುರ್ಬಲ ವರ್ಗದ ಜನರಿಗೆ ನ್ಯಾಯ ದೊರಕಿಸಿಕೊಡಬೇಕೆನ್ನುವ ಅಪೇಕ್ಷೆ ಮೇರೆಗೆ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಅನೇಕ ಅನುಕೂಲತೆಗಳನ್ನು ನೀಡಿದ್ದಾರೆ. ಅಸ್ಪೃಶ್ಯತೆ, ಅಸಮಾನತೆಯ ವಿರುದ್ಧ ದಿಟ್ಟತನದಿಂದ ಹೋರಾಡಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತೆ ಮಾಡಿದ ಫಲವಾಗಿ ಇಂದು ದೇಶದ ಕೋಟ್ಯಾಂತರ ಜನರು ನಿಟ್ಟುಸಿರು ಬಿಡುತ್ತಿದ್ದಾರೆ ಎಂದು ಸ್ಮರಿಸಿದರು.

ದ ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ ಹರೀಶ್ ಕುಮಾರ್ ಮಾತನಾಡಿ, ದೇಶದಲ್ಲಿ ಪ್ರಜಾಪ್ರಭುತ್ವ ಬಲಿಷ್ಠವಾಗಿ ಉಳಿಯಲು ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಕಾರಣ. ಅಸ್ಪೃಶ್ಯತೆಯ ವಿಷವರ್ತುಲದಲ್ಲಿ ಎಲ್ಲ ಹಕ್ಕುಗಳಿಂದ ವಂಚಿತರಾಗಿದ್ದ ಶೋಷಿತ ಸಮುದಾಯಗಳ ವಿಮೋಚನೆಗಾಗಿ, ಹಕ್ಕುಗಳಿಗಾಗಿ ಅವರು ಹೋರಾಡಿದರು. ಸಂವಿಧಾನದ ಬದಲಾವಣೆಯ ಬಗ್ಗೆ ಮಾತನಾಡುವ ಬಿಜೆಪಿಗರು ಅಂಬೇಡ್ಕರ್ ಅವರ ವಿಚಾರಗಳನ್ನು ಗೌರವಿಸುತ್ತಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಂ ಎಸ್ ಮಹಮ್ಮದ್, ಮಿಥುನ್ ರೈ, ಪದ್ಮರಾಜ್ ಆರ್, ಸದಸ್ಯರುಗಳಾದ ಪಿಯೂಸ್ ಎಲ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಜೆ ಅಬ್ದುಲ್ ಸಲೀಂ, ಮೋಹನ್ ಕೋಟ್ಯಾನ್ ಮುಲ್ಕಿ, ಬಾಲಕೃಷ್ಣ ಅಂಚನ್, ಚಂದ್ರಶೇಖರ್ ಭಂಡಾರಿ, ಕೃಷ್ಣ ಪ್ರಸಾದ್ ಆಳ್ವ ಪುತ್ತೂರು, ಪ್ರಮುಖರಾದ ಶಶಿಧರ್ ಹೆಗ್ಡೆ, ಜಿ ಕೃಷ್ಣಪ್ಪ,  ಅಬ್ದುಲ್ ರವೂಫ್, ಲ್ಯಾನ್ಸ್ ಲೋಟೊ ಪಿಂಟೊ, ಟಿ ಹೊನ್ನಯ್ಯ, ಕೆ ಪಿ ಥೋಮಸ್, ಕೇಶವ ಮರೋಳಿ, ಕೆ ಕೆ ಶಾಹುಲ್ ಹಮೀದ್, ಇಬ್ರಾಹಿಂ ನವಾಝ್, ಜೋಕಿಂ ಡಿಸೋಜ, ದಿನೇಶ್ ಮುಳೂರು, ಸುರೇಂದ್ರ ಕಂಬಳಿ, ವಿಶ್ವಾಸ್ ಕುಮಾರ್ ದಾಸ್, ನವೀನ್ ಡಿಸೋಜ, ಸುದರ್ಶನ್ ಜೈನ್, ಕೆ ಅಪ್ಪಿ, ಬಿ ಎಂ ಅಬ್ಬಾಸ್ ಅಲಿ, ಅಶ್ರಫ್ ಬಜಾಲ್, ನೀರಜ್ ಚಂದ್ರಪಾಲ್, ಸಂಶುದ್ದೀನ್ ಬಂದರ್, ನಝೀರ್ ಬಜಾಲ್, ಶಾಲೆಟ್ ಪಿಂಟೊ, ಹಯಾತುಲ್ ಖಾಮಿಲ್, ಸುಹಾನ್ ಆಳ್ವ, ಮಂಜುಳಾ ನಾಯಕ್, ಆಲ್ವಿನ್ ಡಿಸೋಜ, ಗೋವರ್ಧನ್ ಸುರತ್ಕಲ್, ಗೀತಾ ಅತ್ತಾವರ,  ಜೇಮ್ಸ್ ಶಿವಭಾಗ್, ವಹಾಬ್ ಕುದ್ರೋಳಿ, ಶಬೀರ್ ಸಿದ್ದಕಟ್ಟೆ, ನೆಲ್ಸನ್ ಮೊಂತೆರೊ, ಪ್ರೇಮ್ ಬಳ್ಳಾಲ್ ಭಾಗ್, ಜಾರ್ಜ್, ಭಾಸ್ಕರ್ ರಾವ್, ಇಮ್ರಾನ್ ಎ ಆರ್, ಹೈದರ್ ಬೋಳಾರ್, ಫಾರೂಕ್ ಬಯಾಬೆ, ಸಮರ್ಥ್ ಭಟ್ ಮೊದಲಾದವರು ಭಾಗವಹಿಸಿದ್ದರು. 



  • Blogger Comments
  • Facebook Comments

0 comments:

Post a Comment

Item Reviewed: ಅಂಬೇಡ್ಕರ್ ಅವರ ದಿಟ್ಟತನದಿಂದ ಇಂದು ದೇಶದ ಕೋಟ್ಯಂತರ ಜನ ನಿಟ್ಟುಸಿರಿನ ಜೀವನ ನಡೆಸುವಂತಾಗಿದೆ : ರಮಾನಾಥ ರೈ ಬಣ್ಣನೆ Rating: 5 Reviewed By: karavali Times
Scroll to Top