ಬಂಟ್ವಾಳ, ಎಪ್ರಿಲ್ 14, 2025 (ಕರಾವಳಿ ಟೈಮ್ಸ್) : ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ (ರಿ) ಬಂಟ್ವಾಳ ತಾಲೂಕು ಸಮಿತಿಯ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆ ಪ್ರಯುಕ್ತ ಸೋಮವಾರ ಬಂಟ್ವಾಳ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವೈದ್ಯರುಗಳಾದ ಸಮೀಕ್ಷಾ, ಶ್ರೀಮತಿ ವಾಣಿ ಕೆ ಮತ್ತು ಸಿಬ್ಬಂದಿ ವರ್ಗ, ಸೇವಾ ಸಂಘದ ತಾಲೂಕು ಅಧ್ಯಕ್ಷ ಸಂತೋಷ್ ಭಂಡಾರಿಬೆಟ್ಟು, ಗೌರವಾಧ್ಯಕ್ಷ ಧರ್ಣಪ್ಪ ಬಡಗಬೆಳ್ಳೂರು, ಗೌರವ ಸಲಹೆಗಾರರಾದ ರಾಜ ಚೆಂಡ್ತಿಮಾರ್, ಮೋಹನ್ ಬಡಗಬೆಳ್ಳೂರು, ಉಪಾಧ್ಯಕ್ಷ ಚಂದ್ರಹಾಸ್ ಅರ್ಬಿಗುಡ್ಡೆ, ಕೋಶಾಧಿಕಾರಿ ಜಯಂತಿ ವಾಮದಪದವು, ಸಂಘಟನಾ ಕಾರ್ಯದರ್ಶಿ ನಾರಾಯಣ ಬೊಂಡಾಲ, ಜಾನಕಿ ವಾಮದಪದವು ಮೊದಲಾದವರು ಭಾಗವಹಿಸಿದ್ದರು.
0 comments:
Post a Comment