ಬಂಟ್ವಾಳ, ಎಪ್ರಿಲ್ 19, 2025 (ಕರಾವಳಿ ಟೈಮ್ಸ್) : ನಾವೂರು ಗ್ರಾಮದ ಅಗ್ರಹಾರ ಮುಹಿಯುದ್ದೀನ್ ಜುಮಾ ಮಸೀದಿ ಬಳಿ ಅಂತ್ಯ ವಿಶ್ರಮ ಹೊಂದುತ್ತಿರುವ ಹಝ್ರತ್ ಹಯಾತುಲ್ ಔಲಿಯಾ (ರ) ಅವರ ಹೆಸರಿನಲ್ಲಿ 2 ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುವ ಅಗ್ರಹಾರ ಮಖಾಂ ಉರೂಸ್ ಮುಬಾರಕ್ ಕಾರ್ಯಕ್ರಮವು ಎಪ್ರಿಲ್ 23 ರಿಂದ 27ರವರೆಗೆ ಅಗ್ರಹಾರ ಶಂಸುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.
ಎಪ್ರಿಲ್ 23 ರಂದು ಬುಧವಾರ ಅಸ್ತ ಗುರುವಾರ ರಾತ್ರಿ ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯಾಧ್ಯಕ್ಷ ಇರ್ಶಾದ್ ದಾರಿಮಿ ಅಲ್-ಜಝರಿ ಉದ್ಘಾಟಿಸಲಿದ್ದು, ಮಸೀದಿ ಅಧ್ಯಕ್ಷ ಅಯ್ಯೂಬ್ ಅಧ್ಯಕ್ಷತೆ ವಹಿಸುವರು. ವಳಚ್ಚಿಲ್ ಜುಮಾ ಮಸೀದಿ ಖತೀಬ್ ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ ‘ನಮ್ಮ ಜವಾಬ್ದಾರಿಗಳು’ ಎಂಬ ವಿಷಯದಲ್ಲಿ ಉಪನ್ಯಾಸಗೈಯುವರು. ಅಗ್ರಹಾರ ಮುಹಿಯುದ್ದೀನ್ ಜುಮಾ ಮಸೀದಿ ಖತೀಬ್ ಶಮೀರ್ ಫೈಝಿ ಮಾಡಾವು, ಮೈಂದಾಳ ಬದ್ರಿಯಾ ಜುಮಾ ಮಸೀದಿ ಖತೀಬ್ ಇಸ್ಹಾಕ್ ಫೈಝಿ, ಎಂ ಎ ಅಬ್ದುಲ್ ಹಮೀದ್ ದಾರಿಮಿ, ಹಾಫಿಳ್ ಮುಸ್ತಫಾ ಯಮಾನಿ ಬೊಳ್ಳಾಯಿ ಮೊದಲಾದವರು ಉಪಸ್ಥಿತರಿರುವರು.
ಎಪ್ರಿಲ್ 27 ರಂದು ಭಾನುವಾರ ಅಸ್ತ ಸೋಮವಾರ ರಾತ್ರಿ ಸಮಾರೋಪ ಸಮಾರಂಭ ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್-ಅಝ್‍ಹರಿ ಉದ್ಘಾಟಿಸುವರು. ಸಯ್ಯಿದ್ ಹಾರೀಸ್ ತಂಙಳ್ ಅಲ್-ಹೈದ್ರೋಸಿ ಬಾಖವಿ ಅಲ್-ಹೈತಮಿ ಕೇರಳ ಅವರು ದುವಾ ಹಾಗೂ ಮುಖ್ಯ ಭಾಷಣಗೈಯುವರು.
ಈ ಪ್ರಯುಕ್ತ ನಡೆಯುವ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಎಪ್ರಿಲ್ 24 ರಂದು ಗುರುವಾರ ಅಸ್ತ ಶುಕ್ರವಾರ ರಾತ್ರಿ ಬೆಂಗಳೂರು ಚೀಫ್ ಇಮಾಂ ಶಾಫಿ ಇರ್ಫಾನಿ ಫೈಝಿ ‘ಹೃದಯ ಶುದ್ದಿ’ ಎಂಬ ವಿಷಯದಲ್ಲಿ ಉಪನ್ಯಾಸಗೈಯುವರು. ಎಪ್ರಿಲ್ 25 ರಂದು ಶುಕ್ರವಾರ ಅಸ್ತ ಶನಿವಾರ ರಾತ್ರಿ ಕುಂಪಣಮಜಲು ಜುಮಾ ಮಸೀದಿ ಖತೀಬ್ ಉಬೈದುಲ್ಲಾ ಅಝ್‍ಹರಿ ಪಾಂಡವರಕಲ್ಲು ‘ಜೀವನ ಶೈಲಿ ಇಸ್ಲಾಮಿನಲ್ಲಿ’ ಎಂಬ ವಿಷಯದಲ್ಲಿ ಉಪನ್ಯಾಸಗೈಯುವರು. ಎಪ್ರಿಲ್ 26 ರಂದು ಶನಿವಾರ ಅಸ್ತ ಭಾನುವಾರ ರಾತ್ರಿ ನೌಫಲ್ ಸಖಾಫಿ ಕಳಸ ಮುಖ್ಯ ಭಾಷಣಗೈಯುವರು. ಸಮಾರೋಪ ದಿನದಂದು ರಾತ್ರಿ 10 ಗಂಟೆಗೆ ಅನ್ನದಾನ ನಡೆಯಲಿದೆ ಎಂದು ಮಸೀದಿ ಪ್ರಕಟಣೆ ತಿಳಿಸಿದೆ.
0 comments:
Post a Comment