ಉಪ್ಪಿನಂಗಡಿ, ಎಪ್ರಿಲ್ 04, 2025 (ಕರಾವಳಿ ಟೈಮ್ಸ್) : ಇಲ್ಲಿಗೆ ಸಮೀಪದ 34ನೇ ನೆಕ್ಕಿಲಾಡಿ ಗ್ರಾಮದ ಎ ವೈ ಎಂ ಮನೆಯ ನಿವಾಸಿ ಅಝರುದ್ದೀನ್ (38) ಅವರ ಹಾಗೂ ಸಮೀಪದ ಮಹಮ್ಮದ್ ನವಾಝ್ ಅವರ ಮನೆಗಳಿಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ನಗದು ಹಣವನ್ನು ಎಗರಿದ ಘಟನೆ ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ನವಾಝ್ ಅವರು ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ಹೋಗಿದ್ದು, ಇವರ ಮನೆಗೆ ತಾಗಿಕೊಂಡಿರುವ ಹಂಚಿನ ಮನೆಯನ್ನು ಮಹಮ್ಮದ್ ನವಾಝ್ ಅವರಿಗೆ ಬಾಡಿಗೆ ನೀಡಿದ್ದು, ನವಾಝ್ ಕೂಡಾ ತನ್ನ ಪತ್ನಿ ಮಕ್ಕಳನ್ನು ತವರು ಮನೆಗೆ ಕಳಿಸಿದ್ದರು. ನವಾಝ್ ಕೂಡಾ ಬುಧವಾರ ರಾತ್ರಿ ಮಗಳಿಗೆ ಅಸೌಖ್ಯದ ಕಾರಣ ಮನೆಗೆ ಬೀಗ ಪತ್ನಿಯ ಮನೆಗೆ ತೆರಳಿದ್ದರು.
ಮರುದಿನ ನವಾಝ್ ಮನೆಗೆ ವಾಪಾಸು ಬಂದಾಗ ಮನೆಯ ಎದುರಿನ ಬಾಗಿಲು ಒಡೆದಿರುವುದು ಗಮನಕ್ಕೆ ಬಂದಿದೆ. ಅವರ ಮನೆಯ ಗೋದ್ರೆಜಿನಲ್ಲಿದ್ದ 2 ಲಕ್ಷ ರೂಪಾಯಿ ನಗದು ಕಳವುಗೈಯಲಾಗಿದೆ. ಅಝರುದ್ದೀನ್ ಅವರು ಲಾರಿಯ ಕಂತನ್ನು ಕಟ್ಟಲು ಗೋದ್ರೆಜಿನಲ್ಲಿರಿಸಲಾಗಿದ್ದ 2.80 ಲಕ್ಷ ರೂಪಾಯಿ ನಗದು ಹಣವನ್ನು ಕಳವುಗೈಯಲಾಗಿದೆ. ಎರಡು ಮನೆಗಳ ಒಟ್ಟು 4.80 ಲಕ್ಷ ರೂಪಾಯಿ ನಗದು ಹಣ ಕಳವಾಗಿದೆ.
ಅದೇ ರೀತಿ ಪುತ್ತೂರು ತಾಲೂಕು ಪಂಚಾಯತಿನಲ್ಲಿ ವಸತಿ ಯೋಜನೆ ತಾಲೂಕು ನೋಡಲ್ ಅಧಿಕಾರಿಯಾಗಿರುವ 34ನೇ ನೆಕ್ಕಿಲಾಡಿ ನಿವಾಸಿ ಮಹಮ್ಮದ್ ಸಿರಾಜ್ ಅವರ ಮನೆಗೂ ನುಗ್ಗಿದ ಕಳ್ಳರು ಮನೆಯಲ್ಲಿ ಡಬ್ಬದಲ್ಲಿ ಸಂಗ್ರಹಿಸಿಟ್ಟಿದ್ದ 3 ಸಾವಿರ ರೂಪಾಯಿ ನಗದು ಹಾಗೂ ಮೇಜಿನ ಲಾಕರಿನಲ್ಲಿದ್ದ ಸುಮಾರು 8 ಸಾವಿರ ರೂಪಾಯಿ ಮೌಲ್ಯದ 2 ಬೆಳ್ಳಿಯ ಕಾಲು ಚೈನುಗಳನ್ನು ಕಳ್ಳತನ ಮಾಡಲಾಗಿದೆ. ಇವರ ಪತ್ನಿ ಮಕ್ಕಳು ಕಾಟಿಪಳ್ಳದಲ್ಲಿರುವ ತವರು ಮನೆಗೆ ಹೋಗಿದ್ದ ವೇಳೆ ಈ ಕಳವು ಕೃತ್ಯ ನಡೆದಿದೆ. ಈ ಮೂರು ಪ್ರಕರಣಗಳ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment