ಸೌಜನ್ಯ ಕೊಲೆ ಕುರಿತು ವಿಡಿಯೋ : ಯೂಟ್ಯೂಬರ್ ಧೂತ ಸಮೀರ್ ವಿರುದ್ಧದ ಸುಮೋಟೋ ಪ್ರಕರಣಕ್ಕೆ ಹೈಕೋರ್ಟ್ ತಡೆ - Karavali Times ಸೌಜನ್ಯ ಕೊಲೆ ಕುರಿತು ವಿಡಿಯೋ : ಯೂಟ್ಯೂಬರ್ ಧೂತ ಸಮೀರ್ ವಿರುದ್ಧದ ಸುಮೋಟೋ ಪ್ರಕರಣಕ್ಕೆ ಹೈಕೋರ್ಟ್ ತಡೆ - Karavali Times

728x90

11 March 2025

ಸೌಜನ್ಯ ಕೊಲೆ ಕುರಿತು ವಿಡಿಯೋ : ಯೂಟ್ಯೂಬರ್ ಧೂತ ಸಮೀರ್ ವಿರುದ್ಧದ ಸುಮೋಟೋ ಪ್ರಕರಣಕ್ಕೆ ಹೈಕೋರ್ಟ್ ತಡೆ

ಬೆಂಗಳೂರು, ಮಾರ್ಚ್ 11, 2025 (ಕರಾವಳಿ ಟೈಮ್ಸ್) : ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ ತನಿಖಾ ವಿಡಿಯೋ ಮಾಡಿದ್ದ ಯೂಟ್ಯೂಬರ್ ಸಮೀರ್ ಎಂಡಿ ವಿರುದ್ಧ ದಾಖಲಾಗಿದ್ದ ಎಫ್‍ಐಆರ್‍ಗೆ ಹೈಕೋರ್ಟ್ ತಡೆ ನೀಡಿದೆ. ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಎರಡನೇ ವರ್ಷದ ಪಿಯುಸಿ ವಿದ್ಯಾರ್ಥಿನಿ 17 ವರ್ಷದ ಸೌಜನ್ಯಳನ್ನು 2012ರ ಅಕ್ಟೋಬರ್ 9ರಂದು ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿತ್ತು. ಈ ಬಗ್ಗೆ 12 ವರ್ಷಗಳ ಬಳಿಕ ಇದೀಗ ಯೂಟ್ಯೂಬರ್ ಸಮೀರ್ ಎಂ ಡಿ ಎಂಬಾತ ವೀಡಿಯೋ ಮಾಡಿ ಪ್ರಕರಣದ ಬಗ್ಗೆ ಮತ್ತೆ ಬೆಳಕು ಚೆಲ್ಲಲಾಗಿತ್ತು.

ಈ ಬಗ್ಗೆ ಬಿಎನ್‍ಎಸ್ 2023ರ ಸೆಕ್ಷನ್ 299 (ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವುದು) ಅಡಿಯಲ್ಲಿ ಬಳ್ಳಾರಿಯ ಕೌಲ್ ಬಜಾರ್ ಪೆÇಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿತ್ತು. ಸುಮೋಟೋ ಎಫ್‍ಐಆರ್‍ಗೆ ತಡೆಯಾಜ್ಞೆ ನೀಡುವ ಮೂಲಕ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅರ್ಜಿದಾರರಿಗೆ ಮಧ್ಯಂತರ ರಿಲೀಫ್ ನೀಡಿದ್ದಾರೆ. ಸಮೀರ್ ತಮ್ಮ ಯೂಟ್ಯೂಬ್ ಚಾನೆಲ್ ‘ಧೂತ: ಸಮೀರ್ ಎಂಡಿ’ ನಲ್ಲಿ “ಧರ್ಮಸ್ಥಳ ಸೌಜನ್ಯ ಪ್ರಕರಣ” ಎಂಬ ಶೀರ್ಷಿಕೆಯ ವೀಡಿಯೊವನ್ನು ಪೆÇೀಸ್ಟ್ ಮಾಡಿದ್ದರು. ಇದು 18 ಮಿಲಿಯನ್‍ಗಿಂತಲೂ ಹೆಚ್ಚು ಮಂದಿ ವೀಕ್ಷಿಸುವ ಮೂಲಕ ದಾಖಲೆ ನಿರ್ಮಿಸಿತ್ತು. 

ಧರ್ಮಸ್ಥಳ ಪ್ರದೇಶದಲ್ಲಿ ದಶಕಗಳ ಕಾಲ ನಡೆದ ಹಲವಾರು ಕ್ರಿಮಿನಲ್ ಪ್ರಕರಣಗಳನ್ನು ಈ ವೀಡಿಯೊದಲ್ಲಿ ಬೆಳಕು ಚೆಲ್ಲಾಗಿತ್ತು. ವಿಶೇಷವಾಗಿ 2012ರ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮೊದಲಿಗೆ ಸಂತೋಷ್ ರಾವ್ ನನ್ನು ಆರೋಪಿ ಎಂದು ಬಿಂಬಿಸಲಾಗಿತ್ತು. ನಂತರ ಕೋರ್ಟ್ ಆರೋಪದಿಂದ ಖುಲಾಸೆಗೊಳಿಸಿದ್ದು ಹಲವು ಕ್ರಿಮಿನಲ್ ತನಿಖೆಗಳಲ್ಲಿ ಪ್ರಭಾವ ಬೀರಿದ ಮಾದರಿಗಳನ್ನು ವಿಡಿಯೋದಲ್ಲಿ ಹೇಳಲಾಗಿತ್ತು.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಾರ್ಚ್ 5ರಂದು, ಕೌಲ್ ಬಜಾರ್ ಪೆÇಲೀಸರು ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಸಮೀರ್ ಪರ ವಾದ ಮಂಡಿಸಿದ ವಕೀಲ ಎ ವೇಲನ್, ಎಫ್‍ಐಆರ್ ಕಾನೂನು ಪ್ರಕ್ರಿಯೆಯ ಸಂಪೂರ್ಣ ದುರುಪಯೋಗವಾಗಿದೆ ಮತ್ತು ಅರ್ಜಿದಾರರ ಅಭಿವ್ಯಕ್ತಿಯ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ವಾದಿಸಿದರು.

ಸೌಜನ್ಯ ಪ್ರಕರಣವು ಕರ್ನಾಟಕ, ವಿಶೇಷವಾಗಿ ರಾಜ್ಯದ ಕರಾವಳಿ ಪ್ರದೇಶದಲ್ಲಿ ತೀವ್ರ ಚರ್ಚಿಸಲ್ಪಟ್ಟ ಪ್ರಕರಣವಾಗಿದೆ. ನೇತ್ರಾವತಿ ನದಿಯ ಬಳಿ ಆಕೆಯ ಶವ ಪತ್ತೆಯಾಗಿದ್ದು, ಆಕೆಯ ಕೈಗಳನ್ನು ವೇಲ್ ನಿಂದ ಮರಕ್ಕೆ ಕಟ್ಟಲಾಗಿತ್ತು. ಪೆÇಲೀಸರು ಸಂತೋಷ್ ರಾವ್ ವಿರುದ್ಧ ಕೊಲೆ ಆರೋಪ ಹೊರಿಸಿದರು. ಆದರೆ 2023ರ ಜೂನ್ 16ರಂದು ಬೆಂಗಳೂರು ಸೆಷನ್ಸ್ ಕೋರ್ಟ್ ಅವರನ್ನು ಖುಲಾಸೆಗೊಳಿಸಿತು. ಕಾನೂನು ಪ್ರಕ್ರಿಯೆಗಳ ಉದ್ದಕ್ಕೂ, ಸೌಜನ್ಯ ಅವರ ಕುಟುಂಬವು ಸಂತೋಷ್ ರಾವ್ ಅವರನ್ನು ತಪ್ಪಾಗಿ ಆರೋಪಿ ಎಂದು ಬಿಂಬಿಸಲಾಗಿದೆ ಎಂದು ವಾದಿಸಿತ್ತು. ತನಿಖೆಯಲ್ಲಿನ ನ್ಯೂನತೆಗಳನ್ನು ಪ್ರಶ್ನಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಸೌಜನ್ಯ ಕೊಲೆ ಕುರಿತು ವಿಡಿಯೋ : ಯೂಟ್ಯೂಬರ್ ಧೂತ ಸಮೀರ್ ವಿರುದ್ಧದ ಸುಮೋಟೋ ಪ್ರಕರಣಕ್ಕೆ ಹೈಕೋರ್ಟ್ ತಡೆ Rating: 5 Reviewed By: karavali Times
Scroll to Top