ಮಂಗಳೂರು, ಮಾರ್ಚ್ 14, 2025 (ಕರಾವಳಿ ಟೈಮ್ಸ್) : ಮಂಗಳೂರು ನಗರ ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆಯಿತು.
ಸ್ತ್ರೀ ಸೌಂದರ್ಯ ತಜ್ಞೆ ನಿಶಿತಾ ಶೆಟ್ಟಿಯಾನ್ ಫೆರ್ನಾಂಡಿಸ್, ಮೀನುಗಾರಿಕೆ ತಂತ್ರಜ್ಞಾನ ಎಂಜಿನಿಯರಿಂಗ್‍ನಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿರುವ ಬೆಂಗ್ರೆಯ ಪ್ರಾಪ್ತಿ ಮೆಂಡನ್, ಸಮಾಜ ಸೇವಕಿ ಪ್ರತಿಭಾ ಸಾಲ್ಯಾನ್, ಮಂಗಳೂರು ನಗರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷೆ ವೆಲ್ವಿನ್ ಜೇಸನ್, ಉಪಾಧ್ಯಕ್ಷರಾದ ಪೃಥ್ವಿ ಸಾಲ್ಯಾನ್, ಕ್ಲೈಡ್ ಡಿಸೋಜಾ, ಶಾನ್ ಡಿ ಸೋಜಾ, ಕಾರ್ಯದರ್ಶಿ ಅಭಿಷೇಕ್ ಹಾಗೂ ಎನ್.ಎಸ್.ಯು.ಐ ಉಪಾಧ್ಯಕ್ಷೆ ಅಯೋರಾ ಟೆಲ್ಲಿಸ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಮಾಜಿ ಶಾಸಕರಾದ ಜೆ.ಆರ್. ಲೋಬೊ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ ಎಸ್ ಗಟ್ಟಿ, ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಮಂಗಳೂರು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ, ಸದಸ್ಯರಾದ ಆಲಿಸ್ಟನ್ ಡಿಕುನ್ಹಾ, ಸ್ಟ್ಯಾನ್ಲಿ ಪಿಂಟೋ, ಕೆಪಿಎಂಸಿ ಪ್ರಧಾನ ಕಾರ್ಯದರ್ಶಿಗಳಾದ ಸ್ವರೂಪ ಎನ್ ಶೆಟ್ಟಿ, ಚಂದ್ರಕಲಾ ಡಿ ರಾವ್, ಗೀತಾ ಅತ್ತಾವರ್, ನಮಿತಾ ಡಿ ರಾವ್, ಶಕುಂತಲಾ ಕಾಮತ್, ವಸಂತಿ ಅಂಚನ್, ಕಿರಣ ಜೇಮ್ಸ್, ವೀಣಾ ಬೆನೆಡಿಕ್ಟ್, ಮೇರಿ ಪಿಂಟೋ, ವಿಲ್ಮಾ ಡಿ ಕೋಸ್ಟಾ, ಮೀನಾ ಟೆಲ್ಲಿಸ್, ಮೇರಿ ಸಾಂತೀಸ್, ಕುಸುಮ ಬಂಗೇರಾ, ವಸಂತಿ, ರಮಣಿ ಉಮೇಶ್, ಮಲ್ಲಿಕಾ, ಅವಿಟಾ, ವಿಕ್ಟೋರಿಯಾ, ಬೆನೆಡಿಕ್ಟಾ, ಪ್ರೀತಿ ಕರ್ಕೇರಾ, ಚಂದ್ರಾವತಿ, ಪದ್ಮಾವತಿ, ವಿಶಾಲ, ಸುಮತಿ, ವಿನಯಾ, ಬಬಿತಾ, ಉಷಾ ಕಿರಣ್ ಶೆಟ್ಟಿ, ಸಬೀತಾ, ಪ್ರೆಸಿಲ್ಲಾ, ಮರಿಯಾ, ಲತಾ, ಸುಜಾತಾ, ಡೋರಾ, ಸಿಂಥಿಯಾ, ಮಮತಾ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.
ಮಂಗಳೂರು ನಗರ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೂಪಾ ಚೇತನ್ ಸ್ವಾಗತಿಸಿ, ಪ್ರಿಯಾ ಅಂದ್ರಾದೆ ವಂದಿಸಿದರು. ಶಾಂತಲಾ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment