ತುಂಬೆ : ಪತಿಯ ಸ್ಕೂಟರ್ ಸ್ಕಿಡ್ ಆಗಿ ಬಿದ್ದು ಸಹಸವಾರಿಣಿ ಪತ್ನಿಗೆ ಗಾಯ - Karavali Times ತುಂಬೆ : ಪತಿಯ ಸ್ಕೂಟರ್ ಸ್ಕಿಡ್ ಆಗಿ ಬಿದ್ದು ಸಹಸವಾರಿಣಿ ಪತ್ನಿಗೆ ಗಾಯ - Karavali Times

728x90

27 March 2025

ತುಂಬೆ : ಪತಿಯ ಸ್ಕೂಟರ್ ಸ್ಕಿಡ್ ಆಗಿ ಬಿದ್ದು ಸಹಸವಾರಿಣಿ ಪತ್ನಿಗೆ ಗಾಯ

ಬಂಟ್ವಾಳ, ಮಾರ್ಚ್ 27, 2025 (ಕರಾವಳಿ ಟೈಮ್ಸ್) : ಗಂಡನ ಸ್ಕೂಟರ್ ಸ್ಕಿಡ್ ಆಗಿ ಬಿದ್ದು ಹೆಂಡತಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ತುಂಬೆ ಗ್ರಾಮದ ಭಾರತ್ ಆಗ್ರೋ ಇಂಡಸ್ಟ್ರೀಸ್ ಬಳಿ ಮಂಗಳವಾರ ಸಂಭವಿಸಿದೆ. 

ಗಾಯಾಳು ಮಹಿಳೆಯನ್ನು ಕಾಡಬೆಟ್ಟು ಗ್ರಾಮದ ಇ ಕೆ ಮನೆ ನಿವಾಸಿ ಸುಫೈರಾ (41) ಎಂದು ಹೆಸರಿಸಲಾಗಿದೆ. ಇವರು ತನ್ನ ಪತಿ ಮುಹಿದ್ದೀನ್ ಅವರೊಂದಿಗೆ ಸ್ಕೂಟರಿನಲ್ಲಿ ತೆರಳುತ್ತಿದ್ದ ವೇಳೆ ತುಂಬೆಯಲ್ಲಿ ಸ್ಕೂಟರ್ ಸ್ಕಿಡ್ ಆಗಿ ರಸ್ತೆಗೆ ಬಿದ್ದು ಈ ಅಪಘಾತ ಸಂಭವಿಸಿದೆ. ಅಪಘಾತದಿಂದ ಕಾಲು, ಬೆನ್ನು ಹಾಗೂ ಸೊಂಟಕ್ಕೆ ಗಾಯವಾಗಿರುವ ಸುಫೈರಾ ಅವರನ್ನು ಜನಪ್ರಿಯ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ತುಂಬೆ : ಪತಿಯ ಸ್ಕೂಟರ್ ಸ್ಕಿಡ್ ಆಗಿ ಬಿದ್ದು ಸಹಸವಾರಿಣಿ ಪತ್ನಿಗೆ ಗಾಯ Rating: 5 Reviewed By: karavali Times
Scroll to Top