ಬಂಟ್ವಾಳ, ಮಾರ್ಚ್ 13, 2025 (ಕರಾವಳಿ ಟೈಮ್ಸ್) : ತಾಲೂಕಿನಾದ್ಯಂತ ಬುಧವಾರ ರಾತ್ರಿ ಸುರಿದ ಭಾರೀ ಮಳೆಗೆ ಹಲವೆಡೆ ಹಾನಿ ಹಾಗೂ ನಷ್ಟಗಳು ಸಂಭವಿಸಿದೆ. ಮೂಡಪಡುಕೋಡಿ ಗ್ರಾಮದ ನಿವಾಸಿ ಜಯಂತ ಗೌಡ ಬಿನ್ ರುಕ್ಮಯ ಗೌಡ ಅವರ ಮನೆ ಭಾಗಶಃ ಹಾನಿಯಾಗಿದೆ. ಚೆನ್ನೈತ್ತೋಡಿ ಗ್ರಾಮದ ಕರಿಮಲೆ ನಿವಾಸಿ ಶಿವರಾಯ ನಾಯಕ್ ಅವರ ಅಡಿಕೆ ಹಾಗೂ ಬಾಳೆ ಕೃಷಿಗೆ ಹಾನಿ ಸಂಭವಿಸಿದೆ ನಷ್ಟ ಉಂಟಾಗಿದೆ.
ಪಿಲಿಮೊಗರು ಗ್ರಾಮದ ಸುಣ್ಣಡಪೆÇೀಳಿ ನಿವಾಸಿ ಲಲಿತ ಕೋಂ ಸುಂದರ ಎಂಬವರ ವಾಸ್ತವ್ಯದ ಮನೆಗೆ ಹಾನಿಯಾಗಿದೆ. ದಪ್ಪರಬೈಲು ನಿವಾಸಿ ವೆಂಕಪ್ಪ ಶೆಟ್ಟಿ ಬಿನ್ ಸಿದ್ದು ಶೆಟ್ಟಿ ಎಂಬವರ ಅಡಿಕೆ ಕೃಷಿ ನಾಶವಾಗಿದೆ. ಪ್ರಭಾಕ್ಷಿ ಅವರ ವಾಸ್ತವ್ಯದ ಮನೆಗೆ ತಾಗಿಕೊಂಡಿರುವ ಕೊಟ್ಟಿಗೆಗೆ ತೀವ್ರ ಹಾನಿಯಾಗಿದೆ.
ಬಂಟ್ವಾಳ ಕಸಬಾ ಗ್ರಾಮದ ಅರಬ್ಬಿಗುಡ್ಡೆ ನಿವಾಸಿ ಚಿಕ್ಕ ಎಂಬುವರ ವಾಸ್ತವ್ಯದ ಮನೆಗೆ ಮರ ಬಿದ್ದು ಹಾನಿ ಸಂಭವಿಸಿದೆ ಎಂದು ತಾಲೂಕು ಕಚೇರಿ ಮಾಹಿತಿ ತಿಳಿಸಿದೆ.
0 comments:
Post a Comment