ಉಡುಪಿಯಲ್ಲಿ ಮೀನು ಕದ್ದ ನೆಪದಲ್ಲಿ ಮಹಿಳೆಯನ್ನು ಕಟ್ಟಿ ಹಾಕಿ ಹಲ್ಲೆ ನಡೆಸಿರುವುದು ಖೇದಕರ : ಎಂಎಲ್ಸಿ ಡಾ ಮಂಜುನಾಥ ಭಂಡಾರಿ ಆಕ್ರೋಶ - Karavali Times ಉಡುಪಿಯಲ್ಲಿ ಮೀನು ಕದ್ದ ನೆಪದಲ್ಲಿ ಮಹಿಳೆಯನ್ನು ಕಟ್ಟಿ ಹಾಕಿ ಹಲ್ಲೆ ನಡೆಸಿರುವುದು ಖೇದಕರ : ಎಂಎಲ್ಸಿ ಡಾ ಮಂಜುನಾಥ ಭಂಡಾರಿ ಆಕ್ರೋಶ - Karavali Times

728x90

22 March 2025

ಉಡುಪಿಯಲ್ಲಿ ಮೀನು ಕದ್ದ ನೆಪದಲ್ಲಿ ಮಹಿಳೆಯನ್ನು ಕಟ್ಟಿ ಹಾಕಿ ಹಲ್ಲೆ ನಡೆಸಿರುವುದು ಖೇದಕರ : ಎಂಎಲ್ಸಿ ಡಾ ಮಂಜುನಾಥ ಭಂಡಾರಿ ಆಕ್ರೋಶ

ಮಂಗಳೂರು, ಮಾರ್ಚ್ 22, 2025 (ಕರಾವಳಿ ಟೈಮ್ಸ್) : ಉಡುಪಿಯಲ್ಲಿ ಮೀನು ಕದ್ದ ನೆಪದಲ್ಲಿ ಕಾರ್ಮಿಕ ಮಹಿಳೆಯನ್ನು ಕಂಬಕ್ಕೆ ಕಟ್ಟಿಹಾಕಿ ಥಳಿಸಿರುವ ಘಟನೆ ನಿಜಕ್ಕೂ ಖೇದಕರ ಎಂದು ವಿಧಾನ ಪರಿಷತ್ ಸದಸ್ಯ ಡಾ ಮಂಜುನಾಥ ಭಂಡಾರಿ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. 

ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಅವರು, ಸಂಸ್ಕೃತಿಯ ನಾಡು ದೇಗುಲಗಳ ಬೀಡು ಎಂದೇ ಕರೆಯಲ್ಪಡುವ ಉಡುಪಿ ಜಿಲ್ಲೆಗೆ ಇಂತಹ ಘಟನೆಗಳು ಶೋಭೆ ತರುವಂತದ್ದಲ್ಲ. ಘಟನೆ ಕುರಿತು ಸೂಕ್ತ ಕ್ರಮಕ್ಕೆ ನಾಗರಿಕರು ಒತ್ತಾಯಿಸಿರುವ ಹಿನ್ನೆಲೆಯಲ್ಲಿ ಗೃಹ ಸಚಿವರಲ್ಲಿ ಘಟನೆಯನ್ನು ವಿವರಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇನೆ. ಮುಂದೆ ಇಂತಹ ಕೃತ್ಯ ನಾಗರಿಕ ಸಮಾಜದಲ್ಲಿ ಜರುಗದಂತೆ ಎಚ್ಚರಿಕೆ ವಹಿಸುವಂತೆ ಸಭ್ಯ ನಾಗರಿಕರು ಹಾಗೂ ಪೆÇಲೀಸ್ ಇಲಾಖೆ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದು ಡಾ ಭಂಡಾರಿ ಹೇಳಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಉಡುಪಿಯಲ್ಲಿ ಮೀನು ಕದ್ದ ನೆಪದಲ್ಲಿ ಮಹಿಳೆಯನ್ನು ಕಟ್ಟಿ ಹಾಕಿ ಹಲ್ಲೆ ನಡೆಸಿರುವುದು ಖೇದಕರ : ಎಂಎಲ್ಸಿ ಡಾ ಮಂಜುನಾಥ ಭಂಡಾರಿ ಆಕ್ರೋಶ Rating: 5 Reviewed By: karavali Times
Scroll to Top