ಬಂಟ್ವಾಳ, ಮಾರ್ಚ್ 24, 2025 (ಕರಾವಳಿ ಟೈಮ್ಸ್) : ಕೊಯಿಲ ಗ್ರಾಮದ ಪರಾರಿಬೈಲು ಎಂಬಲ್ಲಿನ ತೋಟದ ಬಳಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ಶುಕ್ರವಾರ ರಾತ್ರಿ ದಾಳಿ ನಡೆಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು 9 ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡಿದ್ದು, ಇತರ 4 ಮಂದಿ ಪರಾರಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಕೃಷ್ಣಪ್ಪ (36), ಪ್ರಶಾಂತ (32), ಸತೀಶ (46), ರವಿ (35), ಗೋಪಾಲ (48), ಕೃಷ್ಣ (44), ಅನ್ವರ್ ಸಾದಿಕ್ (34), ಮಹಮ್ಮದ್ ಇಕ್ಬಾಲ್ (42) ಹಾಗೂ ಜಯರಾಮ (51) ಎಂದು ಹೆಸರಿಸಲಾಗಿದ್ದು, ಪೊಲೀಸರಿಂದ ತಪ್ಪಿಸಿ ಪರಾರಿಯಾದವರನ್ನು ಸುಂದರ್ ಶೆಟ್ಟಿ, ಶ್ರೀಧರ, ನಿತೀಶ್ ಸಪಲ್ಯ ಹಾಗೂ ಅಶ್ರಫ್ ಎಂದು ಗುರುತಿಸಲಾಗಿದೆ.
ಕೊಯಿಲಾ ಗ್ರಾಮದ ಪರಾರಿಬೈಲು ನಿತೇಶ್ ಸಪಲ್ಯ ಅವರ ತೋಟದ ಸಮೀಪ ಇರುವ ಸಾರ್ವಜನಿಕ ರಸ್ತೆಯಲ್ಲಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್ಸೈ ಮಂಜುನಾಥ್ ಟಿ (32) ಅವರ ನೇತೃತ್ವದ ಪೆÇಲೀಸರು ಈ ದಾಳಿ ನಡೆಸಿದ್ದು, ಆರೋಪಿಗಳು ಕೃತ್ಯಕ್ಕೆ ಬಳಸುತ್ತಿದ್ದ ಒಟ್ಟು 23,100/- ರೂಪಾಯಿ ನಗದು ಹಣ ಹಾಗೂ ಆಟಕ್ಕೆ ಉಪಯೋಗಿಸಿದ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment