ಬಂಟ್ವಾಳ, ಮಾರ್ಚ್ 29, 2025 (ಕರಾವಳಿ ಟೈಮ್ಸ್) : ಬಿ ಮೂಡ ಗ್ರಾಮದ ಜುಮಾದಿಗುಡ್ಡೆ ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಜುಗಾರಿ ಅಡ್ಡೆಗೆ ಗುರುವಾರ ದಾಳಿ ನಡೆಸಿದ ಬಂಟ್ವಾಳ ನಗರ ಠಾಣಾ ಪೊಲೀಸರು 6 ಮಂದಿ ಆರೋಪಿಗಳ ವಿರುದ್ದ ಶುಕ್ರವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಪುದು ಗ್ರಾಮದ ನಿವಾಸಿ ಅನ್ವರ್ (32), ಸಜಿಪಮೂಡ ಗ್ರಾಮದ ನಿವಾಸಿಗಳಾದ ದಿನೇಶ್ ಕುಮಾರ್ (32), ಸುಂದರ (35), ಕಳ್ಳಿಗೆ ಗ್ರಾಮದ ನಿವಾಸಿ ಪವನ್ ಕುಮಾರ್ (35), ಉಳ್ಳಾಲ ತಾಲೂಕು, ಮುನ್ನೂರು ಗ್ರಾಮದ ಕುತ್ತಾರು ನಿವಾಸಿ ಪ್ರವೀಣ್ ಪಿಂಟೋ (43) ಹಾಗೂ ಸೋಮೇಶ್ವರ ಗ್ರಾಮದ ನಿವಾಸಿ ಹನುಮಂತ (45) ಎಂದು ಹೆಸರಿಸಲಾಗಿದೆ.
ಇಸ್ಪೀಟ್ ಜೂಜಾಟ ನಡೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ನಗರ ಪೊಲೀಸ್ ಠಾಣಾ ಪಿಎಸ್ಸೈ ರಾಮಕೃಷ್ಣ ಅವರ ನೇತೃತ್ವದ ಪೊಲೀಸರು ಈ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಆರೋಪಿಗಳಿಂದ ಜೂಜಾಟಕ್ಕೆ ಬಳಸುತ್ತಿದ್ದ ನಗದು ಹಣ ಸಹಿತ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment