ಮಂಗಳೂರು, ಮಾರ್ಚ್ 11, 2025 (ಕರಾವಳಿ ಟೈಮ್ಸ್) : ಮಂಗಳೂರು-ಕಾರ್ಕಳ ಮಾರ್ಗದ ಮಧ್ಯೆ ಸಂಚರಿಸುವ ಖಾಸಗಿ ಬಸ್ಸಿನಲ್ಲಿ ಮಹಿಳೆಯೋರ್ವರು ಬಿಟ್ಟು ಹೋಗಿದ್ದ ನಗದು, ಚಿನ್ನಾಭರಣ ಹಾಗೂ ಅಗತ್ಯ ದಾಖಲೆಗಳಿದ್ದ ಬ್ಯಾಗನ್ನು ಬಸ್ ಚಾಲಕ ಹೈದರ್ ಹಾಗೂ ನಿರ್ವಾಹಕ ನಿಸಾರ್ ಅವರು ಮಹಿಳೆಗೆ ವಾಪಾಸು ತಲುಪಿಸಿ ಮಾನವೀಯತೆ ಮೆರೆದ ಘಟನೆ ನಡೆದಿದೆ.
ಮಂಗಳೂರು-ಕಾರ್ಕಳ ಮಾರ್ಗದಲ್ಲಿ ಸಂಚರಿಸುವ ನಿಶ್ಮಿತಾ ಎಂಬ ಖಾಸಗಿ ಬಸ್ಸಿನಲ್ಲಿ ವಾಮಂಜೂರು ನಿವಾಸಿ ರೇಖಾ ಎಂಬರಿಗೆ ಸೇರಿದ ಚಿನ್ನದ ಒಡವೆ, ಮೂವತ್ತು ಸಾವಿರಕ್ಕೂ ಹೆಚ್ಚಿನ ನಗದು ಹಣ ಹಾಗೂ ಅಗತ್ಯ ದಾಖಲೆಗಳನ್ನು ಬಸ್ಸಿನಲ್ಲಿ ಕಳೆದುಕೊಂಡಿದ್ದರು.
ಬಸ್ಸಿನ ಚಾಲಕ ಹೈದರ್ ಹಾಗೂ ನಿರ್ವಾಹಕ ನಿಸಾರ್ ಅವರ ಸಮಯ ಪ್ರಜ್ಞೆ ಹಾಗೂ ಮಾನವೀಯತೆ ಕಾರಣದಿಂದ ಅತ್ಯಮೂಲ್ಯ ವಸ್ತುಗಳನ್ನು ಅದರ ಮಾಲಕಿ ರೇಖಾ ಅವರು ಮರಳಿ ಪಡೆದುಕೊಳ್ಳುವಂತಾಗಿದೆ. ಬಸ್ಸಿನ ಚಾಲಕ-ನಿರ್ವಾಹಕರ ಮಾನವೀಯತೆ ಹಾಗೂ ಸೌಹಾರ್ದತೆಯ ನಡೆಗೆ ಸಾರ್ವಜನಿಕರಿಂದ ಶ್ಪಾಘನೆ ವ್ಯಕ್ತವಾಗಿದೆ.
0 comments:
Post a Comment