ಮಂಗಳೂರು, ಮಾರ್ಚ್ 30, 2025 (ಕರಾವಳಿ ಟೈಮ್ಸ್) : ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಭಾನುವಾರ ಮುಸ್ಸಂಜೆ ಶವ್ವಾಲ್ ತಿಂಗಳ ಪ್ರಥಮ ದಿನದ ಚಂದ್ರದರ್ಶನವಾಗಿದ್ದು, ಮಾರ್ಚ್ 31 ರ ಸೋಮವಾರ ಈದುಲ್ ಫಿತ್ರ್ ಹಬ್ಬ ಆಚರಿಸುವಂತೆ ಖಾಝಿಗಳಾದ ತ್ವಾಖಾ ಅಹ್ಮದ್ ಮುಸ್ಲಿಯಾರ್, ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಹಾಗೂ ಎ ಪಿ ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಅವರುಗಳು ಘೋಷಿಸಿದ್ದಾರೆ.
ಮಾರ್ಚ್ 2 ರಿಂದ ಆರಂಭಗೊಂಡ ಪವಿತ್ರ ರಂಝಾನಿನ 29 ಉಪವಾಸ ವೃತಗಳನ್ನು ಪೂರ್ಣಗೊಳಿಸಿದ್ದು, ಇದೀಗ ಶವ್ವಾಲ್ ಚಂದ್ರದರ್ಶನ ಆಗಿರುವ ಹಿನ್ನಲೆಯಲ್ಲಿ ಮಾರ್ಚ್ 31 ರಂದು ಈದುಲ್ ಫಿತ್ರ್ ಹಬ್ಬ ಆಚರಿಸಲಾಗುತ್ತಿದೆ. ಸೋಮವಾರ ಬೆಳಿಗ್ಗೆ ಮಸೀದಿ ಹಾಗೂ ಈದ್ಗಾಗಳಲ್ಲಿ ವಿಶೇಷ ಈದ್ ನಮಾಝ್ ಹಾಗೂ ಖುತುಬಾ ಪಾರಾಯಣ ನಡೆಯಲಿದ್ದು, ಬಳಿಕ ಮುಸ್ಲಿಂ ಬಾಂಧವರು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳಲಿದ್ದಾರೆ.
0 comments:
Post a Comment