ಬಂಟ್ವಾಳ, ಮಾರ್ಚ್ 31, 2025 (ಕರಾವಳಿ ಟೈಮ್ಸ್) : ಪವಿತ್ರ ಈದ್ ದಿನ ಆಗ್ರಹಿಸಿದ್ದ ನಮ್ಮ ಅದೆಷ್ಟೋ ಬಂಧು-ಮಿತ್ರರು ಇಂದು ನಮ್ಮೊಂದಿಗಿಲ್ಲ. ಅವರಿಗೆ ಈ ದಿನವನ್ನು ಸ್ವಾಗತಿಸಲು ಸಾಧ್ಯವಾಗಿಲ್ಲ. ಅಲ್ಲಾಹನ ಅನುಲ್ಲಂಘನೀಯ ವಿಧಿಗೆ ತಲೆಬಾಗಿ ಅವರು ಈ ಲೋಕದಿಂದ ಶಾಶ್ವತ ವಿದಾಯ ಕೋರಿದ್ದಾರೆ. ಅಂತಹ ಬಂಧು-ಮಿತ್ರರನ್ನು ನೆನಪಿಸಿಕೊಂಡು ಭಗವಂತ ನಮಗೆ ಕರುಣಿಸಿದ ಅನುಗ್ರಹಗಳಿಗೆ ಸ್ತುತಿ ಅರ್ಪಿಸುವ ದಿನವಾಗಿದೆ ಪವಿತ್ರ ಈದ್ ಎಂದು ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಮುದರ್ರಿಸ್ ಅಲ್ ಹಾಜ್ ಬಿ ಎಚ್ ಅಬೂಸ್ವಾಲಿಹ್ ಉಸ್ತಾದ್ ಹೇಳಿದರು.
ಸೋಮವಾರ ಮಸೀದಿಯಲ್ಲಿ ಈದುಲ್ ಫಿತ್ರ್ ಹಬ್ಬದ ಪ್ರಯುಕ್ತ ನಡೆದ ವಿಶೇಷ ನಮಾಝ್ ಹಾಗೂ ಖುತುಬಾಗೆ ನೇತೃತ್ವ ನೀಡಿದ ಬಳಿಕ ಈದ್ ಸಂದೇಶ ನೀಡಿದ ಅವರು ಪವಿತ್ರ ರಂಝಾನ್ ತಿಂಗಳ ಬಳಿಕ ಆ ಮಾಸದಲ್ಲಿ ಕೈಗೊಂಡ ಸತ್ಕರ್ಮಗಳು ನಿರಂತರವಾಗಿ ಮುಂದುವರಿಸುವ ಮೂಲಕ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳಿ ಬದುಕುವಂತೆ ಕರೆ ನೀಡಿದರು.
0 comments:
Post a Comment