ಬಂಟ್ವಾಳ, ಮಾರ್ಚ್ 10, 2025 (ಕರಾವಳಿ ಟೈಮ್ಸ್) : ತುಂಬೆ ಗ್ರಾಮದ ತುಂಬೆಕೋಡಿ ನಿವಾಸಿ ನಾರಾಯಣ ಬಿ (65) ಅವರು ಹೃದಯಾಘಾತದಿಂದ ಸೋಮವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಗಣೇಶ್ ಬೀಡಿ ಕಂಪೆನಿಯಲ್ಲಿ ನೌಕರರಾಗಿ, ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸಿದ್ದ ಇವರು ನಿವೃತ್ತಿ ನಂತರ ಅದೇ ಸಂಸ್ಥೆಯಲ್ಲಿ ಪಾಲುದಾರರಾಗಿ ಸೇವೆ ಕಾರ್ಯನಿರ್ವಹಿಸಿದ್ದರು.
ಸ್ಟಾಫ್ ವರ್ಕ್‍ರ್ಸ್ ಯೂನಿಯನ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ, ಎಐಟಿಯುಸಿ ಜಿಲ್ಲಾ ಕಾರ್ಯಕಾರಿ ಸದಸ್ಯರಾಗಿ, ಕಮ್ಯೂನಿಸ್ಟ್ ಪಕ್ಷದ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಇವರು ಸಾಮಾಜಿಕವಾಗಿ ಬಂಟ್ವಾಳ ಭಂಡಾರಿಬೆಟ್ಟು ಯುವಜನ ವ್ಯಾಯಾಮ ಶಾಲೆಯ ಪ್ರಧಾನ ಕಾರ್ಯದರ್ಶಿಯಾಗಿ, ಭಂಡಾರಿಬೆಟ್ಟು ಶ್ರೀ ಕೃಷ್ಣ ಮಂದಿರ ಪದಾಧಿಕಾರಿಯಾಗಿ, ಫರಂಗಿಪೇಟೆ ಕುಲಾಲ ಸುಧಾರಕ ಸಂಘದ ಅಧ್ಯಕ್ಷರಾಗಿ, ಬಂಟ್ವಾಳ ಕುಲಾಲ ಸುಧಾರಕ ಸಂಘದ ಕಟ್ಟಡ ಸಮಿತಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
0 comments:
Post a Comment