ಬಂಟ್ವಾಳ, ಮಾರ್ಚ್ 05, 2025 (ಕರಾವಳಿ ಟೈಮ್ಸ್) : ಅಡ್ಡೂರಿನಲ್ಲಿ ಸೇತುವೆಯ ದುರಸ್ಥಿ ಕಾರ್ಯ ನಡೆಯುತ್ತಿದ್ದು, ಘನ ವಾಹನಗಳ ಸಂಚಾರ ಸಂಪೂರ್ಣವಾಗಿ £ಷೇಧಿಸಲಾಗಿದೆ. ಕೇವಲ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ ಮತ್ತು ಕಾರು ಇತ್ಯಾದಿ ಲಘು ವಾಹನಗಳಿಗೆ ಮಾತ್ರ ಈ ರಸ್ತೆಯಲ್ಲಿ ಸಂಚರಿಸುವ ಅವಕಾಶ ಕಲ್ಪಿಸಲಾಗಿದೆ. ಈ ರಸ್ತೆಯಲ್ಲಿ ಸಂಚರಿಸುವ ಖಾಸಗಿ ಬಸ್ಸುಗಳು ಸೇತುವೆಯಲ್ಲಿ ಸಾಗದೇ ಮಿನಿ ಬಸ್ ಮೂಲಕ ಸಂಚಾರ ನಡೆಯುತ್ತಿದೆ.
ಆದರೆ ಇದೇ ಸೇತುವೆಯ ಮೇಲೆ ರಾತ್ರಿ ಸಮಯದಲ್ಲಿ ಮಾತ್ರ ಘನ ವಾಹನಗಳು ನಿರಂತರವಾಗಿ ಸಂಚರಿಸುತ್ತಿದೆ. ಶಾಲಾ ವಿದ್ಯಾರ್ಥಿಗಳಿಗೂ ರಿಯಾಯಿತಿ ನೀಡದೆ ಶಾಲಾ ಬಸ್ ಸೆತುವೆಯ ಇಕ್ಕೆಲಗಳಲ್ಲಿ ವಿದ್ಯಾರ್ಥಿಗಳನ್ನು ಇಳಿಸಿ ವಾಪಾಸು ಹೋಗುತ್ತಿದೆ. ಹೀಗಿದ್ದರೂ ಯಾವ ಮರಳು ಸಾಗಾಟದ ಲಾರಿಗಳ ನಿರ್ಬಂಧಕ್ಕಾಗಿ ಸೇತುವೆಗೆ ಗೇಟ್ ಅಳವಡಿಸಲಾಗಿದೆಯೋ ಇದೀಗ ಅದೇ ಮರಳು ಲಾರಿಗಳು ರಾತ್ರಿ ಸಮಯದಲ್ಲಿ ಅಧಿಕಾರಿಗಳ ಕಣ್ತಪ್ಪಿಸಿ ರಾಜಾರೋಷವಾಗಿ ಸಂಚಾರ ನಡೆಸುತ್ತಿದೆ. ಈ ಬಗ್ಗೆ ವೀಡಿಯೋ ಸಹಿತ ಸಾರ್ವಜನಿಕರು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರು ತುರ್ತು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
0 comments:
Post a Comment