ಬಂಟ್ವಾಳ, ಫೆಬ್ರವರಿ 03, 2025 (ಕರಾವಳಿ ಟೈಮ್ಸ್) : ವಗ್ಗ ಕುಲಾಲ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಕುಲಾಲ ಕ್ರಿಡೋತ್ಸವ-2025 ವಗ್ಗ ಸರಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಭಾನುವಾರ ನಡೆಯಿತು.
ಸ್ಥಾಪಕ ಗೌರಧ್ಯಕ್ಷ ಹರಿಯಪ್ಪ ಮೂಲ್ಯ ಸೇರ್ಬೇಟ್ಟು ಕ್ರೀಡೋತ್ಸವ ಉದ್ಘಾಟಿಸಿದರು. ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಸೇವಾದಳ ದಳಪತಿ ಪ್ರದೀಪ್ ಅತ್ತಾವರ, ವಿದ್ಯುತ್ ಗುತ್ತಿಗೆದಾರ ಸುಂದರ ಮೂಲ್ಯ ಮಾರೈದೊಟ್ಟು, ಅಲಂಪುರಿ ಪ್ರೆಂಡ್ಸ್ ಕ್ಲಬ್ ಅಧ್ಯಕ್ಷ ಲೋಕೇಶ್ ಕುಲಾಲ್ ಅಲಂಪುರಿ, ಉದ್ಯಮಿ ಜಿತೇಂದ್ರ ಸಾಲ್ಯಾನ್, ನಾವೂರು ಗ್ರಾಮ ಪಂಚಾಯತ್ ಸದಸ್ಯ ಉಮೇಶ್ ಕುಲಾಲ್ ನಾವೂರು, ಉತ್ಸಾಹಿ ತರುಣ ವೃಂದ ಅಧ್ಯಕ್ಷ ಶಿವರಾಮ್ ಸೇರ್ಬೆಟ್ಟು, ಮಹಿಳಾ ಘಟಕಾಧ್ಯಕ್ಷೆ ಶೋಭಾ ಅಲಂಪುರಿ, ಗೌರವಾಧ್ಯಕ್ಷ ಕೂಸಪ್ಪ ಕುಲಾಲ್, ಪುರುಷೋತ್ತಮ ಕುಲಾಲ್ ಹೆರೊಟ್ಟು ಭಾಗವಹಿಸಿದ್ದರು.
ಸಂಘಟನಾ ಕಾರ್ಯದರ್ಶಿ ಜಯಂತ್ ಬಂಗೇರ ಸ್ವಾಗತಿಸಿ, ವಗ್ಗ ಕುಲಾಲ ಸಂಘದ ಸಂಘಟನಾ ಕಾರ್ಯದರ್ಶಿ ಹರೀಶ್ ಕುಲಾಲ್ ವಂದಿಸಿದರು. ಕೀರ್ತಿ ಕುಲಾಲ್ ಜಾರಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಕ ಹರೀಶ್ ಕುಲಾಲ್ ನರಿಕೊಂಬು ಮತ್ತು ಪ್ರವೀಣ್ ಬಸ್ತಿ ಸಹಕರಿಸಿದರು.
0 comments:
Post a Comment