ಅಜ್ಮೀರ್ (ರಾಜಸ್ಥಾನ), ಫೆಬ್ರವರಿ 13, 2025 (ಕರಾವಳಿ ಟೈಮ್ಸ್) : ಅಜ್ಮೀರ್ ಶರೀಫ್ ಖ್ವಾಜಾ ಗರೀಬ್ ನವಾಝ್ ಹಝ್ರತ್ ಖ್ವಾಜಾ ಮುಈನುದ್ದೀನ್ ಚಿಶ್ತಿಯ್ಯಿಲ್ ಅಜ್ಮೀರಿ (ರ) ಅವರ ದರ್ಗಾ ವಠಾರದ ಮಸೀದಿ, ಸಮೀಪದ ಶಾಹಜಹಾನ್ ಮಸೀದಿ, ಅಕ್ಬರೀ ಮಸೀದಿಗಳಲ್ಲಿ ಶಹಬಾನ್ ತಿಂಗಳ ಚಾಂದ್ 15 ರ ಶಬೇ ಬರಾಅತ್ ರಾತ್ರಿಯನ್ನು ಗುರುವಾರ (ಫೆ 13) ರ ಮಗ್ರಿಬ್ ಬಳಿಕ ಭಕ್ತಿ ಪೂರ್ವಕವಾಗಿ ಆಚರಿಸಲಾಯಿತು.
ಎಂದಿಗಿಂತ ಮೀರಿದ ಭಾರೀ ಪ್ರಮಾಣದ ಜನಸಂದಣಿಯೇ ಹರಿದು ಬಂದಿದ್ದು, ಮಗ್ರಿಬ್ ಬಳಿಕ ಕುರ್ ಆನ್ ಪಾರಾಯಣ, ದ್ಸಿಕ್ರ್, ತಸ್ಬೀಹ್ ಮೊದಲಾದ ಆರಾಧನಾ ಕರ್ಮಗಳಲ್ಲಿ ತೊಡಗಿಸಿಕೊಂಡ ದೃಶ್ಯ ಕಂಡು ಬಂತು. ತಡ ರಾತ್ರಿವರೆಗೂ ಜನಸಂದಣಿ ಖ್ವಾಜಾ ಗರೀಬ್ ನವಾಝ್ ದರ್ಗಾ ಬಳಿ ನೆರೆದಿತ್ತು. ಮಸೀದಿಗಳ ವಿವಿಧೆಡೆ ದಾನಿಗಳಿಂದ ಅನ್ನದಾನ, ತಬರ್ರುಕ್ ವಿತರಣೆ ನಡೆಯಿತು.
0 comments:
Post a Comment