ಸುಳ್ಯ, ಫೆಬ್ರವರಿ 27, 2025 (ಕರಾವಳಿ ಟೈಮ್ಸ್) : ಸುಳ್ಯ ಪೊಲೀಸರು ನಗರದ ಎರಡು ಕಡೆ ಬುಧವಾರ ಪ್ರತ್ಯೇಕ ದಾಳಿ ನಡೆಸಿ ಇಬ್ಬರು ಗಾಂಜಾ ಗಿರಾಕಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಆರಂತೋಡು ನಿವಾಸಿ ತುಷಾರ್ ಬಿ ಕೆ (22) ಹಾಗೂ ಮಂಡ್ಯ ಜಿಲ್ಲೆಯ ಕೊಪ್ಪಲು ಗ್ರಾಮದ ತಿಮ್ಮನ ಪಾಂಡವಪುರ ನಿವಾಸಿ ದರ್ಶನ್ ಟಿ ಎಂ (23) ಎಂದು ಹೆಸರಿಸಲಾಗಿದೆ. ಸುಳ್ಯ ಠಾಣಾ ಪಿಎಸ್ಐ ಸಂತೋಷ್ ಬಿ ಪಿ ನೇತೃತ್ವದ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
ಬುಧವಾರ ಮಧ್ಯಾಹ್ನ ಖಚಿತ ಮಾಹಿತಿ ಮೇರೆಗೆ ಸುಳ್ಯ ಕಸ್ಬಾ ಗ್ರಾಮದ ಕುರುಂಜಿಬಾಗ್ ಎಂಬಲ್ಲಿ ದಾಳಿ ಮಾಡಿ, ಆರೋಪಿ ತುಷಾರ್ ಎಂಬಾತನನ್ನು ವಶಕ್ಕೆ ಪಡೆದು ಆತನಿಂದ 510 ಗ್ರಾಂ ಗಾಂಜಾ ವಶಕ್ಕೆ ಪಡೆದುಕೊಳ್ಳಲಾಗಿದೆ.
ಅದೇ ದಿನ ಬೆಳಿಗ್ಗಿನ ಜಾವ ಸುಳ್ಯ ಕೆ ವಿ ಜಿ ಜಂಕ್ಷನ್ ಬಳಿ ಸಂಶಯಸ್ಪದವಾಗಿ ನಿಂತಿದ್ದ ದರ್ಶನ್ ನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆ ನಡೆಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟ ಹಿನ್ನಲೆಯಲ್ಲಿ ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
0 comments:
Post a Comment