ಬಂಟ್ವಾಳ, ಫೆಬ್ರವರಿ 01, 2025 (ಕರಾವಳಿ ಟೈಮ್ಸ್) : ವಗ್ಗ ಕುಲಾಲ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಕುಲಾಲ ಕ್ರೀಡೋತ್ಸವವು ಫೆಬ್ರವರಿ 2 ರಂದು ವಗ್ಗ ಪ್ರೌಢ ಶಾಲಾ ಮೈದಾನದಲ್ಲಿ ನಡೆಯಲಿದೆ. ಕುಲಾಲ ಸಂಘದ ಸ್ಥಾಪಕಾಧ್ಯಕ್ಷ ಹರಿಯಪ್ಪ ಮೂಲ್ಯ ಕ್ರೀಡೋತ್ಸವ ಉದ್ಘಾಟಿಸಲಿದ್ದು, ಸಂಘದ ಅಧ್ಯಕ್ಷ ಪುರುಷೋತ್ತಮ ಕುಲಾಲ್ ಹೇರೊಟ್ಟು ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಮೂಲ್ಯ ಯಾನೆ ಕುಲಾಲರ ಮಾತೃ ಸಂಘದ ಸೇವಾದಳದ ದಳಪತಿ ಪ್ರದೀಪ್ ಅತ್ತಾವರ, ವಿದ್ಯುತ್ ಗುತ್ತಿಗೆದಾರ ಸುಂದರ ಮೂಲ್ಯ ಮರಾಯಿದೊಟ್ಟು, ಆಲಂಪುರಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಲೋಕೇಶ್ ಕುಲಾಲ್, ಉದ್ಯಮಿ ಜಿತೇಂದ್ರ ಸಾಲ್ಯಾನ್, ನಾವೂರ ಗ್ರಾಮ ಪಂಚಾಯತ್ ಸದಸ್ಯ ಉಮೇಶ್ ಕುಲಾಲ್ ಭಾಗವಹಿಸಲಿದ್ದಾರೆ.
ಕ್ರೀಡಾಕೂಟವು ಕಾವಳಮೂಡೂರು, ದೇವಶ್ಯಮೂಡೂರು, ಕೊಡಂಬೆಟ್ಟು, ದೇವಸ್ಯಪಡೂರು, ಮೂಡುಪಡುಕೋಡಿ, ನಾವೂರು, ಮೂಡುನಡುಗೋಡು, ಸರಪಾಡಿ, ಮಣಿನಾಲ್ಕೂರು ಗ್ರಾಮದ ಕುಲಾಲ ಸಮಾಜ ಬಾಂಧವರಿಗಾಗಿ ನಡೆಯಲಿದ್ದು, ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ಹಾಗೂ ಗುಂಪು ಸ್ಪರ್ಧೆ ನಡೆಯಲಿದೆ ಎಂದು ಸಂಘದ ಕಾರ್ಯದರ್ಶಿ ಚಂದ್ರಶೇಖರ ಕುಲಾಲ್ ಆಲಂಪುರಿ ತಿಳಿಸಿದ್ದಾರೆ.
0 comments:
Post a Comment