ಬೆಳ್ತಂಗಡಿ, ಫೆಬ್ರವರಿ 20, 2025 (ಕರಾವಳಿ ಟೈಮ್ಸ್) : ಮನೆಯಾಕೆ ಅಡುಗೆ ಕೋಣೆಯಲ್ಲಿರುವಾಗಲೇ ಮನೆಯ ಕೋಣೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ನೆರಿಯಾ ಗ್ರಾಮದ ಅಕ್ಕೋಳೆ ಎಂಬಲ್ಲಿ ಬುಧವಾರ ನಡೆದಿದೆ.
ಇಲ್ಲಿನ ನಿವಾಸಿ ಫಾತಿಮತ್ ರಂಝೀನ್ (19) ಅವರ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದ್ದು, ಈ ಬಗ್ಗೆ ಅವರು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದಾರೆ.
ಫಾತಿಮತ್ ರಂಝೀನ್ ಅವರು ಬುಧವಾರ ಬೆಳಿಗ್ಗೆ ಸಮಯ ಸುಮಾರು 9 ಗಂಟೆಗೆ ತನ್ನ ಮನೆಯಲ್ಲಿ, ಮನೆಯ ಬಾಗಿಲು ತೆರೆದಿಟ್ಟು ಅಡುಗೆ ಕೋಣೆಯಲ್ಲಿ ಕೆಲಸ ಮಾಡಿಕೊಂಡಿದ್ದು, ಕೆಲಸ ಮುಗಿಸಿ ಬೆಳಿಗ್ಗೆ 9.30 ಗಂಟೆಗೆ ತನ್ನ ಮನೆಯಲ್ಲಿರುವ ಕೋಣೆಗೆ ಹೋದಾಗ ಗೋದ್ರೆಜ್ ಬಾಗಿಲು ತೆರೆದು ಬಟ್ಟೆಗಳೆಲ್ಲಾ ಚಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿತ್ತು. ಗೋದ್ರೆಜ್ ನಲ್ಲಿ ಇಟ್ಟಿದ್ದ ಸುಮಾರು 52 ಗ್ರಾಂ ಚಿನ್ನಾಭರಣಗಳು ಕಾಣೆಯಾಗಿದೆ. ಇವರು ಅಡುಗೆ ಕೋಣೆಯಲ್ಲಿದ್ದ ವೇಳೆ ಮನೆಯೊಳಗೆ ನುಗ್ಗಿದ ಕಳ್ಳರು ಸುಮಾರು 3.12 ಲಕ್ಷ ರೂಪಾಯಿ ಮೌಲ್ಯದ 52 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment