ಬಂಟ್ವಾಳ, ಫೆಬ್ರವರಿ 12, 2025 (ಕರಾವಳಿ ಟೈಮ್ಸ್) : ತೀವ್ರ ಹದಗೆಟ್ಟು ಸಂಚಾರಕ್ಕೆ ಅಯೋಗ್ಯವಾಗಿದ್ದ ಬಂಟ್ವಾಳ ಪುರಸಭಾ ವ್ಯಾಪ್ತಿಯ 2ನೇ ವಾರ್ಡಿನ, ಬಂಟ್ವಾಳ ಕಸಬಾ ಗ್ರಾಮದ ಜಿಪಿಟಿ-ಕೆಳಗಿನ ಮಂಡಾಡಿ ಕಾಂಕ್ರಿಟೀಕರಣಗೊಂಡ ರಸ್ತೆಯನ್ನು ಮಾಜಿ ಸಚಿವ ಬಿ ರಮಾನಾಥ ರೈ ಅವರು ಉದ್ಘಾಟಿಸಿದರು.
ಸ್ಥಳೀಯ ಪುರಸಭಾ ಸದಸ್ಯ ಪುರೊಷೋತ್ತಮ ಎಸ್ ಬಂಗೇರ ಅವರ 5 ಲಕ್ಷ ರೂಪಾಯಿ ಅನುದಾನದಲ್ಲಿ ಈ ರಸ್ತೆಯನ್ನು ಕಾಂಕ್ರಿಟೀಕರಣಗೊಳಿಸಲಾಗಿದೆ.
ಈ ಸಂದರ್ಭ ಕೆಪಿಸಿಸಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್, ಬುಡಾ ಅಧ್ಯಕ್ಷ ಬೇಬಿ ಕುಂದರ್, ಪ್ರಮುಖರಾದ ರಾಜೇಶ್ ರೋಡ್ರಿಗಸ್, ಸಂತೋಷ್, ರೋಬರ್ಟ್, ಕೃಷ್ಣಪ್ಪ ಕುಲಾಲ್, ವೆಂಕಪ್ಪ ಪೂಜಾರಿ, ಲಿಂಗಪ್ಪ ಕುಲಾಲ್, ವಿಶ್ವನಾಥ ಪೂಜಾರಿ, ದಿವಾಕರ ಕುಲಾಲ್, ಲೋಕೇಶ್, ಹರಿಶ್ಚಂದ್ರ, ಜಗದೀಶ್, ಗಣೇಶ್, ನಿತೇಶ್, ಸುರೇಂದ, ಚಂದ್ರ ನಿಧಿ ಶಾಮಿಯಾನ, ರುಜಿತ್ ಕುಂದರ್, ದೀಪಕ್ ಸಾಂಗ್ಲಿ, ಸತೀಶ್, ಜನಾರ್ದನ ಕುಲಾಲ್, ಪವನ್ ಆಳ್ವಾ ಉಪಸ್ಥಿತರಿದ್ದರು.
0 comments:
Post a Comment