ಬಂಟ್ವಾಳ, ಫೆಬ್ರವರಿ 11, 2025 (ಕರಾವಳಿ ಟೈಮ್ಸ್) : ಕರಿಯಂಗಳ ಗ್ರಾಮದ ಬಡಕಬೈಲು ಎಂಬಲ್ಲಿನ ಗೋಣಿ ಚೀಲ ಗೋದಾಮಿನಲ್ಲಿ ಸೋಮವಾರ ಮಧ್ಯರಾತ್ರಿ ವೇಳೆ ಬೆಂಕಿ ಅವಘಡ ಸಂಭವಿಸಿದ್ದು, ಪರಿಸರದ ಮೂರು ಮನೆಗಳಿಗೆ ಹಾನಿ ಉಂಟಾಗಿದೆ. ಸುದ್ದಿ ತಿಳಿದು ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಅವರು ರಾತ್ರಿಯೇ ಸ್ಥಳಕ್ಕೆ ಭೇಟಿ ನೀಡಿ ಅಗ್ನಿ ಶಾಮಕ ಸಿಬ್ಬಂದಿಗಳಿಗೆ ರಕ್ಷಣಾ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸೂಕ್ತ ನಿರ್ದೇಶನ ನೀಡಿ ಸಂತ್ರಸ್ತರಿಗೆ ಧೈರ್ಯ ತುಂಬಿದ್ದಾರೆ.
ಇಲ್ಲಿನ ನಿವಾಸಿ ಮುಹಮ್ಮದ್ ಯಾನೆ ಮೋನಾಕ ಎಂಬವರ ಗೋಣಿ ಚೀಲ ದಾಸ್ತಾನು ಇರಿಸುವ ಗೋದಾಮಿನಲ್ಲಿ ವಿದ್ಯುತ್ ಶಾರ್ಟ್ ಸರ್ಕೂಟ್ ನಿಂದಾಗಿ ಈ ವಿದ್ಯುತ್ ಅವಘಡ ಸಂಭವಿಸಿದೆ ಎನ್ನಲಾಗಿದ್ದು, ಗೋದಾಮು ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಪಕ್ಕದ ನಿವಾಸಿಗಳಾದ ಹಮೀದ್ ಹಾಗೂ ಶರ್ಪುದ್ದೀನ್ ಎಂಬವರ ಮನೆಗಳಿಗೂ ಬೆಂಕಿ ತಗುಲಿದೆ. ಯಾವುದೇ ಜೀವ ಹಾನಿ ಸಂಭವಿಸದೆ ಪರಿಸರವಾಸಿಗಳು ಸೇಫ್ ಆಗಿದ್ದಾರೆ.
ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕದಳ ಸಾರ್ವಜನಿಕರ ಸಹಕಾರದೊಂದಿಗೆ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
0 comments:
Post a Comment