ಬಂಟ್ವಾಳ, ಫೆಬ್ರವರಿ 24, 2025 (ಕರಾವಳಿ ಟೈಮ್ಸ್) : ಚಾಲಕಿಯ ನಿಯಂತ್ರಣ ಮೀರಿದ ಕಾರು ಅಂಗಡಿಯೊಳಗೆ ನುಗ್ಗಿದ ಪರಿಣಾಮ ಮಹಿಳೆಯೋರ್ವರು ಮೃತಪಟ್ಟು ಮತ್ತೋರ್ವರು ಗಾಯಗೊಂಡ ಘಟನೆ ಚೆನ್ನೈತ್ತೋಡಿ ಗ್ರಾಮದ ಪಾಲೆದಮರ ಎಂಬಲ್ಲಿ ಭಾನುವಾರ ಸಂಜೆ ಸಂಭವಿಸಿದೆ.
ಮೃತ ಮಹಿಳೆಯನ್ನು ಅಂಗಡಿಯಲ್ಲಿ ಕುಳಿತಿದ್ದ ಶ್ರೀಮತಿ ಸುಮತಿ ಎಂದು ಹೆಸರಿಸಲಾಗಿದ್ದು, ಗಾಯಾಳುವನ್ನು ಅಂಗಡಿಗೆ ಬಂದಿದ್ದ ಗ್ರಾಹಕ ಲೂಯಿಸ್ ಡಿ ಕೋಸ್ತ ಎಂದು ಹೆಸರಿಸಲಾಗಿದೆ. ಶ್ರೀಮತಿ ಶೋಭಾ ಎಂಬವರು ಚಲಾಯಿಸುತ್ತಿದ್ದ ಕೆಎ21 ಎಂ8167 ನೋಂದಣಿ ಸಂಖ್ಯೆಯ ಕಾರು ಆಕೆಯ ನಿಯಂತ್ರಣ ಮೀರಿ ಅಂಗಡಿಗೆ ನುಗ್ಗಿದ ಪರಿಣಾಮ ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ಸುಮತಿ ಅವರನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ವೇಳೆ ಅವರು ಮೃತಪಟ್ಟಿದ್ದಾರೆ. ಘಟನೆಯಿಂದ ಕಾರಿನ ಮುಂಭಾಗ ಜಖಂಗೊಂಡಿದೆ. ಈ ಬಗ್ಗೆ ಅಂಗಡಿ ಮಾಲಕನ ಸಂಬಂಧಿ ಬೆಳ್ತಂಗಡಿ ಕಸಬಾ ನಿವಾಸಿ ಗಣೇಶ್ ಮಲ್ಯ ಅವರು ನೀಡಿದ ದೂರಿನಂತೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment