ಬಂಟ್ವಾಳ, ಜನವರಿ 13, 2025 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಬಿ ಕಸ್ಬಾ ಗ್ರಾಮದ ಜಕ್ರಿಬೆಟ್ಟು ನದಿ ಕಿನಾರೆಯ ಜಾಕ್ ವೆಲ್ ನಲ್ಲಿ ತುಂಬಿರುವ ಮರಳು ಮತ್ತು ಕೆಸರು ಶುಚೀಕರಣ ಕಾಮಗಾರಿ ಹಿನ್ನಲೆಯಲ್ಲಿ ಜನವರಿ 16 ರಿಂದ 19ರವರೆಗೆ ಪುರಸಭಾ ವ್ಯಾಪ್ತಿಯಲ್ಲಿ ಬೃಹತ್ ನೀರು ಸರಬರಾಜು ವ್ಯವಸ್ಥೆಯಲ್ಲಿ ನೀರಿನ ವ್ಯತ್ಯಯ ಉಂಟಾಗಲಿದೆ. ಪುರವಾಸಿಗಳು ಈ 4 ದಿನಗಳಲ್ಲಿ ಪುರಸಭೆಯೊಂದಿಗೆ ಸಹಕರಿಸುವಂತೆ ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಅವರು ಮಾಧ್ಯಮ ಮೂಲಕ ಜನರಿಗೆ ಕೋರಿಕೊಂಡಿದ್ದಾರೆ.
13 January 2025
- Blogger Comments
- Facebook Comments
Subscribe to:
Post Comments (Atom)
0 comments:
Post a Comment