ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷಾ ಅಂತಿಮ ವೇಳಾಪಟ್ಟಿ ಪ್ರಕಟ : ಮಾ 1 ರಿಂದ 20 ವರೆಗೆ ಪಿಯುಸಿ ಹಾಗೂ ಮಾ 21 ರಿಂದ ಎ 4 ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ - Karavali Times ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷಾ ಅಂತಿಮ ವೇಳಾಪಟ್ಟಿ ಪ್ರಕಟ : ಮಾ 1 ರಿಂದ 20 ವರೆಗೆ ಪಿಯುಸಿ ಹಾಗೂ ಮಾ 21 ರಿಂದ ಎ 4 ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ - Karavali Times

728x90

10 January 2025

ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷಾ ಅಂತಿಮ ವೇಳಾಪಟ್ಟಿ ಪ್ರಕಟ : ಮಾ 1 ರಿಂದ 20 ವರೆಗೆ ಪಿಯುಸಿ ಹಾಗೂ ಮಾ 21 ರಿಂದ ಎ 4 ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ

 ಬೆಂಗಳೂರು, ಜನವರಿ 10, 2025 (ಕರಾವಳಿ ಟೈಮ್ಸ್) : ರಾಜ್ಯದಲ್ಲಿ 2024-25ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್ಎಸ್ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟಗೊಂಡಿದೆ. ಮಾರ್ಚ್ 1 ರಿಂದ ಮಾರ್ಚ್ 20 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ -1 ಹಾಗೂ ಮಾರ್ಚ್ 21 ರಿಂದ ಎಪ್ರಿಲ್ 4 ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ -1 ನಡೆಯಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದೆ.

ದ್ವೀತೀಯ ಪಿಯುಸಿಯ ಎಲ್ಲ ಅಂತಿಮ ಪರೀಕ್ಷೆಯು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ನಡೆಯಲಿವೆ. ಎಲ್ಲ ವಿಷಯಗಳಿಗೂ ವಿಷಯ ಸಂಕೇತಗಳನ್ನು ಕೊಡಲಾಗಿದ್ದು, ಆಯಾ ವಿಷಯಕ್ಕೆ ಸಂಬಂಧಿಸಿದಂತೆ ಗರಿಷ್ಠ 80 ಅಂಕಗಳಿಗೆ ಲಿಖಿತ ಪರೀಕ್ಷೆಗಳು ನಡೆಯಲಿವೆ.


ಪಿಯುಸಿ ಪರೀಕ್ಷೆ-1 ರ ವೇಳಾಪಟ್ಟಿ

ಮಾ.1- ಕನ್ನಡ, ಅರೇಬಿಕ್

ಮಾ.3- ಗಣಿತ, ಶಿಕ್ಷಣ ಶಾಸ್ತ್ರ, ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ

ಮಾ.4- ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಉರ್ದು, ಸಂಸ್ಕೃತ

ಮಾ.5- ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ

ಮಾ.6- ಪರೀಕ್ಷೆ ಇಲ್ಲ

ಮಾ.7- ಇತಿಹಾಸ, ಭೌತಶಾಸ್ತ್ರ

ಮಾ.8- ಪರೀಕ್ಷೆ ಇಲ್ಲ

ಮಾ.9 - ಭಾನುವಾರ ರಜೆ

ಮಾ.10- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭ ಶಾಸ್ತ್ರ, ಗೃಹ ವಿಜ್ಞಾನ

ಮಾ.11- ಪರೀಕ್ಷೆ ಇಲ್ಲ

ಮಾ.12- ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲ ಗಣಿತ

ಮಾ.13- ಅರ್ಥಶಾಸ್ತ್ರ

ಮಾ.14 - ಪರೀಕ್ಷೆ ಇಲ್ಲ

ಮಾ.15- ಇಂಗ್ಲೀಷ್

ಮಾ.16 - ಭಾನುವಾರ ರಜೆ

ಮಾ.17 - ಭೂಗೋಳ ಶಾಸ್ತ್ರ

ಮಾ.18- ಜೀವಶಾಸ್ತ್ರ, ಸಮಾಜ ಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ

ಮಾ.19- ಹಿಂದೂಸ್ಥಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ಆಟೋಮೊಬೈಲ್, 

ಮಾ.20- ಹಿಂದಿ


ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ರಾಜ್ಯಾದ್ಯಂತ ಏಕಕಾಲಕ್ಕೆ ನಡೆಯಲಿದೆ. ಮಾ. 21 ರಿಂದ ಎಪ್ರಿಲ್ 4 ರವರೆಗೆ ಪರೀಕ್ಷೆ ನಡೆಯಲಿದ್ದು, ಶಾಲಾ ಅಭ್ಯರ್ಥಿ, ಪುನರಾವರ್ತಿತ ಶಾಲಾ ಅಭ್ಯರ್ಥಿ, ಖಾಸಗಿ ಅಭ್ಯರ್ಥಿ ಹಾಗೂ ಪುನರಾವರ್ತಿತ ಖಾಸಗಿ ಅಭ್ಯರ್ಥಿಗಳು ಏಕಕಾಲದಲ್ಲಿ ಪರೀಕ್ಷೆಯನ್ನು ಎದುರಿಸಲಿದ್ದಾರೆ. ಎಲ್ಲ ಪರೀಕ್ಷೆಗಳು ಬೆಳಗ್ಗೆ 10 ಗಂಟೆಗೆ ಆರಂಭವಾಗಿ ಮಧ್ಯಾಹ್ನ 1.15 ಗಂಟೆಗೆ ಮುಕ್ತಾಯಗೊಳ್ಳಲಿವೆ.


ಎಸ್‌ಎಸ್‌ಎಲ್‌ಸಿ ಪರೀಕ್ಷೆ- 1 ರ ವೇಳಾಪಟ್ಟಿ


ಮಾ.21 - ಕನ್ನಡ (ಪ್ರಥಮ ಭಾಷೆಗಳು) 

ಮಾ.24 - ಗಣಿತ (ಐಚ್ಛಿಕ-ಸಮಾಜ ಶಾಸ್ತ್ರ)

ಮಾ.26 - ಇಂಗ್ಲೀಷ್ (ದ್ವಿತೀಯ ಭಾಷೆ - ಕನ್ನಡ..)

ಮಾ.29 - ಸಮಾಜ ವಿಜ್ಞಾನ

ಎ. 2 - ವಿಜ್ಞಾನ

ಎ. 4 - ಹಿಂದಿ (ತೃತೀಯ ಭಾಷೆಗಳು)

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷಾ ಅಂತಿಮ ವೇಳಾಪಟ್ಟಿ ಪ್ರಕಟ : ಮಾ 1 ರಿಂದ 20 ವರೆಗೆ ಪಿಯುಸಿ ಹಾಗೂ ಮಾ 21 ರಿಂದ ಎ 4 ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ Rating: 5 Reviewed By: lk
Scroll to Top