ನಕ್ಸಲ್ ಶರಣಾಗತಿ ಹಾಗೂ ನೆರವು ನೀಡಿದ ಅಮಿತ್ ಷಾ ಹಾಗೂ ಫಡ್ನವೀಸ್ ಅವರ ಕ್ರಮದ ಬಗ್ಗೆ ಪ್ರಶ್ನಿಸುವ ದಮ್ಮು ಸುನಿಲ್ ಕುಮಾರ್‍ಗಿದೆಯೇ : ರಾಜ್ಯದಲ್ಲಿ ನಕ್ಸಲ್ ಶರಣಾಗತಿ ಬಗ್ಗೆ ವಿಮರ್ಶಿಸಿದ ಬಿಜೆಪಿ ಶಾಸಕರ ಕಾಲೆಳೆದ ಮುಖ್ಯಮಂತ್ರಿ - Karavali Times ನಕ್ಸಲ್ ಶರಣಾಗತಿ ಹಾಗೂ ನೆರವು ನೀಡಿದ ಅಮಿತ್ ಷಾ ಹಾಗೂ ಫಡ್ನವೀಸ್ ಅವರ ಕ್ರಮದ ಬಗ್ಗೆ ಪ್ರಶ್ನಿಸುವ ದಮ್ಮು ಸುನಿಲ್ ಕುಮಾರ್‍ಗಿದೆಯೇ : ರಾಜ್ಯದಲ್ಲಿ ನಕ್ಸಲ್ ಶರಣಾಗತಿ ಬಗ್ಗೆ ವಿಮರ್ಶಿಸಿದ ಬಿಜೆಪಿ ಶಾಸಕರ ಕಾಲೆಳೆದ ಮುಖ್ಯಮಂತ್ರಿ - Karavali Times

728x90

8 January 2025

ನಕ್ಸಲ್ ಶರಣಾಗತಿ ಹಾಗೂ ನೆರವು ನೀಡಿದ ಅಮಿತ್ ಷಾ ಹಾಗೂ ಫಡ್ನವೀಸ್ ಅವರ ಕ್ರಮದ ಬಗ್ಗೆ ಪ್ರಶ್ನಿಸುವ ದಮ್ಮು ಸುನಿಲ್ ಕುಮಾರ್‍ಗಿದೆಯೇ : ರಾಜ್ಯದಲ್ಲಿ ನಕ್ಸಲ್ ಶರಣಾಗತಿ ಬಗ್ಗೆ ವಿಮರ್ಶಿಸಿದ ಬಿಜೆಪಿ ಶಾಸಕರ ಕಾಲೆಳೆದ ಮುಖ್ಯಮಂತ್ರಿ

 ಬೆಂಗಳೂರು, ಜನವರಿ 09, 2025 (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಆರು ಮಂದಿ ನಕ್ಸಲೀಯರು ಶರಣಾಗುತ್ತಿರುವಾಗ ಬೆಚ್ಚಿಬಿದ್ದಿರುವ ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರು ಕಳೆದ ತಿಂಗಳು ಛತ್ತೀಸ್‍ಘಢದಲ್ಲಿ ಶರಣಾದ 30 ನಕ್ಸಲರನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೇ ಖುದ್ದಾಗಿ ಬರಮಾಡಿಕೊಂಡು ಆನಂದ ಭಾಷ್ಪ ಸುರಿಸಿದಾಗ ಯಾಕೆ ಬೆಚ್ಚಿ ಬಿದ್ದಿಲ್ಲ? ಶಾ ಅವರಿಗೆ ನಕ್ಸಲರ ಬಗ್ಗೆ ಯಾಕೆ ಇಷ್ಟೊಂದು ಪ್ರೀತಿ ಎಂದು ಕೇಳುವ ದಮ್ಮು ಸುನೀಲ್ ಕುಮಾರ್ ಅವರಿಗೆ ಇದೆಯೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. 

ರಾಜ್ಯದಲ್ಲಿ ನಕ್ಸಲ್ ಶರಣಾಗತಿ ಬಗ್ಗೆ ಟೀಕಿಸಿರುವ ಶಾಸಕ ಸುನಿಲ್ ಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಯಿಸಿರುವ ಸಿಎಂ ಅವರು, ಕಳೆದ ವರ್ಷ ಮಹಾರಾಷ್ಟ್ರದಲ್ಲಿ ಶರಣಾದ ನಕ್ಸಲ್ ದಂಪತಿಗೆ ಅಲ್ಲಿನ ಬಿಜೆಪಿ ಸರಕಾರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು 41 ಲಕ್ಷ ರೂಪಾಯಿಗಳ ನೆರವು ನೀಡಿರುವುದು ಶಾಸಕ ಸುನೀಲ್ ಕುಮಾರ್ ಅವರಿಗೆ ಗೊತ್ತಿರಲಿಲ್ಲವೇ? ಈ ನೆರವನ್ನು ಯಾವ ಮಾನದಂಡದಲ್ಲಿ ನೀಡಿದ್ದೀರಿ ಎಂದು ಕೇಳುವ ಧೈರ್ಯ ಸುನೀಲ್ ಕುಮಾರ್ ಅವರಿಗೆ ಇದೆಯೇ? ಎಂದು ಸವಾಲೆಸೆದಿದ್ದಾರೆ. 

ಶರಣಾಗಿರುವ ಈ ನಕ್ಸಲೀಯರು ಅನುಸರಿಸಿದ ಹಿಂಸಾಮಾರ್ಗದ ಬಗ್ಗೆ ನಮಗೆಲ್ಲರಿಗೂ ವಿರೋಧವಿದೆ. ಆದರೆ ಇವರಲ್ಲಿ ಯಾರೂ ಜನರ ತೆರಿಗೆ ಹಣವನ್ನು ನುಂಗಿದ ಭ್ರಷ್ಟರೂ ಅಲ್ಲ, ರಾಮ-ಪರಶುರಾಮನ ಮೂರ್ತಿ ನಿರ್ಮಾಣದಲ್ಲಿಯೂ ಮೋಸ ಮಾಡಿ ಜೇಬು ತುಂಬಿಕೊಂಡವರೂ ಅಲ್ಲ ಎಂದು ಕಟಕಿಯಾಡಿದ ಸಿಎಂ ಲಾಠಿ-ದೊಣ್ಣೆ, ಕತ್ತಿ-ತ್ರಿಶೂಲಗಳನ್ನು ನೀಡಿ ಅಮಾಯಕರನ್ನು ಹಿಂಸಾಮಾರ್ಗಕ್ಕೆ ಇಳಿಸಿ, ರಾಜಕೀಯ ಲಾಭ ಗಳಿಸುವ ಕುತಂತ್ರದ ರಾಜಕಾರಣ ನಮ್ಮದ್ದಲ್ಲ. ದಾರಿ ತಪ್ಪಿ ಹಿಂಸೆಯ ಮಾರ್ಗ ಹಿಡಿದವರ ಮನವೊಲಿಸಿ, ಸಮಾಜದ ಮುಖ್ಯವಾಹಿನಿಗೆ ಸೇರಿಸಿ, ಅವರನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ಪರಿವರ್ತನೆ ಮಾಡುವುದು ಒಂದು ಸರ್ಕಾರದ ಕರ್ತವ್ಯವಾಗಿದೆ. ಇದೇ ಕರ್ತವ್ಯವನ್ನು ನಮ್ಮ ಸರ್ಕಾರ ಪಾಲಿಸುತ್ತಾ ಬಂದಿದೆ ಎಂದು ಮುಖ್ಯಮಂತ್ರಿ ತಿರುಗೇಟು ನೀಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ನಕ್ಸಲ್ ಶರಣಾಗತಿ ಹಾಗೂ ನೆರವು ನೀಡಿದ ಅಮಿತ್ ಷಾ ಹಾಗೂ ಫಡ್ನವೀಸ್ ಅವರ ಕ್ರಮದ ಬಗ್ಗೆ ಪ್ರಶ್ನಿಸುವ ದಮ್ಮು ಸುನಿಲ್ ಕುಮಾರ್‍ಗಿದೆಯೇ : ರಾಜ್ಯದಲ್ಲಿ ನಕ್ಸಲ್ ಶರಣಾಗತಿ ಬಗ್ಗೆ ವಿಮರ್ಶಿಸಿದ ಬಿಜೆಪಿ ಶಾಸಕರ ಕಾಲೆಳೆದ ಮುಖ್ಯಮಂತ್ರಿ Rating: 5 Reviewed By: karavali Times
Scroll to Top