ಬಂಟ್ವಾಳ, ಜನವರಿ 09, 2025 (ಕರಾವಳಿ ಟೈಮ್ಸ್) : ಹಿರಿಯ ಕಮ್ಯೂನಿಸ್ಟ್ ಮುಂದಾಳು, ಕಾರ್ಮಿಕ ನಾಯಕ, ಸಿಪಿಐಎಂ ಪಕ್ಷದ ಬಂಟ್ವಾಳ ತಾಲೂಕು ಮಾಜಿ ಕಾರ್ಯದರ್ಶಿ ಕಾಮ್ರೇಡ್ ಬಿ ವಾಸು ಗಟ್ಟಿ (80) ವಯೋಸಹಜ ಕಾಯಿಲೆಯಿಂದ ಗುರುವಾರ ಸಂಜೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಹಲವು ವರ್ಷಗಳ ಕಾಲ ಬಂಟ್ವಾಳ ತಾಲೂಕು ಸಿಪಿಐ(ಎಂ) ಕಾರ್ಯದರ್ಶಿಯಾಗಿ ಬೀಡಿ ಕಾರ್ಮಿಕರ ಹಾಗೂ ರೈತ ಸಂಘಟನೆಯ ಮುಖಂಡರಾಗಿ ಕೆಲಸ ಮಾಡಿದ್ದ ಇವರು ಹಲವು ಜನಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು.
ಅವರ ಅಂತಿಮ ದರ್ಶನ ಹಾಗೂ ಅಂತಿಮ ವಿಧಿವಿಧಾನ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಅವರ ಬಿ ಸಿ ರೋಡು ಸಮೀಪದ ಮೊಡಂಕಾಪು ನಿವಾಸದಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ. ಮೃತರು ಪತ್ನಿ, ಇಬ್ಬರು ಪುತ್ರರು ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
0 comments:
Post a Comment