ಬಂಟ್ವಾಳ ಸಮಾಜ ಸೇವಾ ಸಹಕಾರಿ ಬ್ಯಾಂಕಿನಲ್ಲಿ ಕೋಟ್ಯಂತರ ರೂಪಾಯಿ ವಂಚನೆ ನಡೆದರೂ ಕ್ರಮ ಕೈಗೊಳ್ಳದ ಆಡಳಿತ ಮಂಡಳಿಯ ನಡೆ ಸಂಶಯಕ್ಕೆ ಕಾರಣವಾಗಿದೆ : ಸದಾಶಿವ ಬಂಗೇರ ಆತಂಕ - Karavali Times ಬಂಟ್ವಾಳ ಸಮಾಜ ಸೇವಾ ಸಹಕಾರಿ ಬ್ಯಾಂಕಿನಲ್ಲಿ ಕೋಟ್ಯಂತರ ರೂಪಾಯಿ ವಂಚನೆ ನಡೆದರೂ ಕ್ರಮ ಕೈಗೊಳ್ಳದ ಆಡಳಿತ ಮಂಡಳಿಯ ನಡೆ ಸಂಶಯಕ್ಕೆ ಕಾರಣವಾಗಿದೆ : ಸದಾಶಿವ ಬಂಗೇರ ಆತಂಕ - Karavali Times

728x90

21 January 2025

ಬಂಟ್ವಾಳ ಸಮಾಜ ಸೇವಾ ಸಹಕಾರಿ ಬ್ಯಾಂಕಿನಲ್ಲಿ ಕೋಟ್ಯಂತರ ರೂಪಾಯಿ ವಂಚನೆ ನಡೆದರೂ ಕ್ರಮ ಕೈಗೊಳ್ಳದ ಆಡಳಿತ ಮಂಡಳಿಯ ನಡೆ ಸಂಶಯಕ್ಕೆ ಕಾರಣವಾಗಿದೆ : ಸದಾಶಿವ ಬಂಗೇರ ಆತಂಕ

 ಬಂಟ್ವಾಳ, ಜನವರಿ 21, 2025 (ಕರಾವಳಿ ಟೈಮ್ಸ್) : ಇಲ್ಲಿನ ಸಮಾಜ ಸೇವಾ ಸಹಕಾರಿ ಸಂಘದಲ್ಲಿ ನಕಲಿ ಚಿನ್ನ ಅಡವಿಟ್ಟು ಸಾಲ ಪಡೆದಿರುವ ಈಶ್ವರಮಂಗಲದ ಅಬೂಬಕ್ಕರ್ ಸಿದ್ದೀಕ್ ಸುಮಾರು ರೂಪಾಯಿ 2,11,89,800-00 ಮತ್ತು ಶ್ರೀಮತಿ ರೋಶನಾಬಿ ಶಾಂತಿನಗರ ಬಜಾಲ್ ಇವರು ಸುಮಾರು 26,10,300-00 ಸಹಕಾರಿ ಸಂಘಕ್ಕೆ ವಂಚನೆ ಮಾಡಿ ಸಾಲವನ್ನು ಪಡೆದಿರುತ್ತಾರೆ. ವಂಚನೆಗೈದಿರುವ ಇವರನ್ನು ಕೂಡಲೇ ಬಂಧಿಸಬೇಕು. ಅಬೂಬಕ್ಕರ್ ಸಿದ್ದೀಕ್ ಮತ್ತು ರೋಶನಾಬಿ ಇವರು ಒಂದೇ ತರದ 511 ನಕಲಿ ಬಲೆಗಳನ್ನು ಅಡವಿಟ್ಟು ಸಂಘಕ್ಕೆ ವಂಚಿಸಿದರೂ ಆಡಳಿತ ಮಂಡಳಿಯವರು ಯಾವುದೇ ಕಾನೂನು ಕ್ರಮ ಕೈಗೊಳ್ಳದಿರುವುದು ಸಂಶಕ್ಕೆ ಎಡೆ ಮಾಡಿದೆ ಎಂದು ಸಮಾಜ ಸೇವಾ ಸಹಕಾರಿ ಮಾಜಿ ನಿರ್ದೇಶಕ ಸದಾಶಿವ ಬಂಗೇರ ತಿಳಿಸಿದ್ದಾರೆ. 

ಆಡಳಿತ ಮಂಡಳಿಯ ಕುಮ್ಮಕ್ಕಿನಿಂದ ನಡೆದಿದೆಯೋ? ಎಂಬ ಸತ್ಯವನ್ನು ಸಾರ್ವಜಕರಿಗೆ ತಿಳಿಸಬೇಕು. ಈ ನಕಲಿ ಚಿನ್ನವನ್ನು ಅಡವಿಟ್ಟು ಸಾಲ ಪಡೆದಿರುವ ಅಬೂಬಕ್ಕರ್ ಸಿದ್ದಿಕ್ ಈ ಬಲೆಗಳು ನಮ್ಮ ದೇಶದಲ್ಲೇ ತಯಾರಾಗಿದೆಯೋ ಅಥವಾ ವಿದೇಶಿ ನಂಟಿದೆಯೋ? 2,38,800 ರೂಪಾಯಿ ಹಣವನ್ನು ಏನಾದರೂ ಅಪರಾಧ ಚಟುವಟಿಕೆಗಳಿಗೆ ಉಪಯೋಗಿಸಿರುವ ಸಾಧ್ಯತೆಯೂ ಇರುವುದರಿಂದ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದವರು ಆಗ್ರಹಿಸಿದ್ದಾರೆ. ಈ ಬಗ್ಗೆ ಈಗಾಗಲೇ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಷಾ ಹಾಗೂ ಕೇಂದ್ರ ತನಿಖಾ ತಂಡ ಎನ್‍ಐಎಗೂ ಮನವಿ ಸಲ್ಲಿಸಲಾಗಿದೆ ಎಂದಿರುವ ಸದಾಶಿವ ಬಂಗೇರ ಅವರು ಈಗಾಗಲೇ ಸಹಕಾರಿ ಸಂಘದ ಸರಪನನ್ನು ಬಂಧಿಸಿದ್ದಾರೆ. ಅದೇ ರೀತಿ ಪ್ರಥಮ ಆರೋಪಿ ಅಬೂಬಕ್ಕರ್ ಸಿದ್ದೀಕ್‍ನನ್ನು ಪೆÇಲೀಸರು ಬಂಧಿಸಲು ಕಾರ್ಯಪ್ರವೃತ್ತರಾಗುತ್ತಿರುವುದ ಮಧ್ಯೆ ಬ್ಯಾಂಕ್ ಆಡಳಿತ ಮಂಡಳಿಯವರು ಹೈಕೋರ್ಟಿನಿಂದ ತಾತ್ಕಾಲಿಕ ತಡೆಯಾಜ್ಞೆ  ತಂದಿರುವುದರಿಂದ ಅಬೂಬಕ್ಕರ್ ಸಿದ್ದಿಕ್ ಮತ್ತು ಆಡಳಿತ ಮಂಡಳಿಯವರಿಗೆ ಒಳಒಪ್ಪಂದ ಆಗಿದೆಯೇ ಎಂಬ ಬಗ್ಗೆಯೂ ಸಂಶಯ ಮೂಡುತ್ತಿದೆ. ಅಬೂಬಕ್ಕರ್ ಸಿದ್ದೀಕ್‍ನನ್ನು ಬಂಧಿಸಿದರೆ ಎಲ್ಲಾ ಸತ್ಯ ಸಂಗತಿ ಬಯಲಾಗಲಿದೆ. ಇಷ್ಟೊಂದು ಕೋಟಿ ಹಣ ಯಾರ ಖಾತೆಗೆ ಜಮೆಯಾಗಿದೆ. ಎಲ್ಲಿ ಹೋಗಿದೆ? ಕೋಟಿ ಕೋಟಿ ಅವ್ಯವಹಾರ ಆದುದರಿಂದ ಇದನ್ನು ಸಿಬಿಐ ಮತ್ತು ಇಡಿ ಸಂಸ್ಥೆಯಿಂದ ತಖೆಯಾಗಬೇಕೆಂದು ಸರಕಾರಕ್ಕೆ ಮನವಿಯನ್ನು ಸಲ್ಲಿಸುತ್ತೇವೆ. ಇದೇ ರೀತಿ ಮುಂದುವರಿದರೆ ಭಾರತ ದೇಶದ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮ ಬೀಳಬಹುದು ಎಂದವರು ಆತಂಕ ವ್ಯಕ್ತಪಡಿಸಿದ್ದಾರೆ. 

ನಮ್ಮ ಆಡಳಿತದ ಅವಧಿಯಲ್ಲಿ ಸಮಾಜ ಸೇವಾ ಸಹಕಾರಿ ಬ್ಯಾಂಕ್ ಆಗಿತ್ತು. ಆದರೆ ಈಗಿನ ಆಡಳಿತ ಅವಧಿಯ ಬೇಜವಾಬ್ದಾರಿಯಿಂದ ಸಹಕಾರಿ ಸಂಘವಾಗಿ ಬದಲಾಗಿದೆ. ನಮ್ಮ ಆಡಳಿತ ಅವಧಿಯಲ್ಲಿ ಉದಾಹರಣೆ 2001-02 ರಲ್ಲಿ 17 ಲಕ್ಷ ಹನ್ನೊಂದು ಸಾವಿರ ನಿವ್ಹಳ ಲಾಭದಲ್ಲಿ ಸದಸ್ಯರಿಗೆ ಶೇಕಡಾ 20%, 2002-03ರಲ್ಲಿ 22 ಲಕ್ಷ, 2003-04 ರಲ್ಲಿ 22 ಲಕ್ಷ, 2004-05 ರಲ್ಲಿ 20 ಲಕ್ಷ, ಶೇಕಡಾ 20%, 2010-11ರಲ್ಲಿ 49 ಲಕ್ಷ, 2011-12ರಲ್ಲಿ 64 ಲಕ್ಷ, 2012-13ರಲ್ಲಿ 63 ಲಕ್ಷ, 2013-14ರಲ್ಲಿ 84 ಲಕ್ಷ, 2014-15ರಲ್ಲಿ 1 ಕೋಟಿ 15 ಲಕ್ಷ, ಈ ಸಂದರ್ಭ ಸರಾಸರಿ ಶೇಕಡಾ 19, ಶೇಕಡಾ 20, ಶೇಕಡಾ 21 ರಂತೆ ಡಿವಿಡೆಂಡನ್ನು ಹಂಚಲಾಗಿತ್ತು ಎಂದಿರುವ ಬಂಗೇರ ಅವರು, ಆದರೆ ಈಗಿನ ಆಡಳಿತ ಮಂಡಳಿಯ ಅವಧಿಯಲ್ಲಿ 5 ಕೋಟಿ ಲಾಭ ತೋರಿಸಿ, ಸದಸ್ಯರಿಗೆ ಡಿವಿಡೆಂಡ್ ಮಾತ್ರ ಶೇಕಡಾ 17% ನೀಡಿರುತ್ತಾರೆ. ಇತ್ತೀಚಿನ ಬೆಳವಣಿಗೆಯಲ್ಲಿ ಸಂಘದ ಸಿಬ್ಬಂದಿಗಳು ಭಯದ ವಾತಾವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಉದಾಹರಣೆಗೆ ಮಂಗಳೂರಿನಲ್ಲಿ ನಡೆದ  ಪತ್ರಿಕಾಗೋಷ್ಟಿಯಲ್ಲಿ ಸಿಬ್ಬಂದಿಗಳು ನಡೆದುಕೊಂಡ ನಡಾವಳಿಕೆ. ಒಂದು ಸಹಕಾರಿ ಸಂಘದಲ್ಲಿ ಆಡಳಿತ ಮಂಡಳಿ ಇರುವಾಗ ಸಹಕಾರಿ ಸಂಘದ ಸಿಬ್ಬಂದಿಗಳು ಪತ್ರಿಕಾಗೋಷ್ಠಿ ಕರೆದ ಇತಿಹಾಸವೇ ಇಲ್ಲ. ಆಡಳಿತ ಮಂಡಳಿಯ ಭೃಷ್ಟಾಚಾರದಿಂದ ಸಿಬ್ಬಂದಿಗಳಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು.

2005-06ರಲ್ಲಿ ನಮ್ಮ ಆಡಳಿತ ಇರುವಾಗ ಬಂಟ್ವಾಳ ಬೈಪಾಸ್ ಬಳಿ ಸುಮಾರು 26 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡವನ್ನು ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಅರ್ಪಣೆ ಮಾಡಿರುತ್ತೇವೆ. ಈ ಕಟ್ಟಡದ ನೆಲ ಮಾಳಿಗೆಯಲ್ಲಿ ಇಂಟರ್‍ಲಾಕ್ ಅಳವಡಿಸಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದ್ದೇವೆ. ಆದರೆ ಈಗಿನ ಆಡಳಿತ ಮಂಡಳಿಯು ಸ್ಥಳೀಯ ಸಂಸ್ಥೆಯ ಅನುಮತಿಯನ್ನು ಪಡೆಯದೇ ಕಾನೂನು ಬಾಹಿರ ನೆಲ ಅಂತಸ್ತಿನ ಇಂಟರ್‍ಲಾಕ್ ತೆಗೆದು ಕೇವಲ ಟೈಲ್ಸ್ ಅಳವಡಿಸಿ, ಸುಮಾರು 23 ಲಕ್ಷ ಖರ್ಚಾದುದನ್ನು ತೋರಿಸಿದ್ದಾರೆ. ಕಟ್ಟಡ ನಿರ್ಮಾಣಕ್ಕೆ 26 ಲಕ್ಷದಲ್ಲಿ ಖರ್ಚಾಗಿದ್ದು, ಆದರೆ ನೆಲ ಅಂತಸ್ತಿನಲ್ಲಿ ಅಳವಡಿಸಿರುವ ಟೈಲ್ಸ್ 23 ಲಕ್ಷ ಖರ್ಚಾಗಿರುತ್ತದೆ. ಇದಕ್ಕಿಂತ ದೊಡ್ಡ ಭೃಷ್ಟಾಚಾರ ಇನ್ನೊಂದು ಇದೆಯಾ ಎಂದು ಪ್ರಶ್ನಿಸಿರುವ ಅವರು ಸಹಕಾರಿ ಸಂಘದಲ್ಲಿ ಯಾವುದೇ ಶಾಖೆಗೆ ಸ್ವಂತ ಅಂಗಡಿ ಕೋಣೆಯನ್ನು ಪಡೆಯುವಾಗ ರಾಷ್ಟ್ರೀಯ ಹೆದ್ದಾರಿಯ ಅನುಮತಿ ಇರುವ ಕಟ್ಟಡವನ್ನು ಪಡೆಯಬೇಕೆಂಬ ನಿಯಮವಿದೆ. ಆದರೆ ಈಗಿನ ಆಡಳಿತ ಮಂಡಳಿಯು ಇದನ್ನು ಉಲ್ಲಂಘಿಸಿ ಕೆಲವೊಂದು ಶಾಖೆಯನ್ನು ಪಡೆದಿರುತ್ತಾರೆ. ಖರೀದಿ ಮಾಡುವಾಗ ಅಧಿಕ ಹಣವನ್ನು ಪಾವತಿಸಿ ಅಂಗಡಿ ಕೋಣೆ ಪಡೆದಿದ್ದು ಸದಸ್ಯರು ಇದನ್ನೆಲ್ಲಾ ಸತ್ಯಾಸತ್ಯತೆಯನ್ನು ಗಮನಿಸಿ ಮುಂದಿನ ದಿನಗಳಲ್ಲಿ ಉತ್ತಮ ರೀತಿಯಲ್ಲಿ ಆಡಳಿತ ನಡೆಸುವ ಮಂದಿಗೆ ಮತ ನೀಡಿ ಕಳಿಸುವಂತೆ ವಿನಂತಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ಸಮಾಜ ಸೇವಾ ಸಹಕಾರಿ ಬ್ಯಾಂಕಿನಲ್ಲಿ ಕೋಟ್ಯಂತರ ರೂಪಾಯಿ ವಂಚನೆ ನಡೆದರೂ ಕ್ರಮ ಕೈಗೊಳ್ಳದ ಆಡಳಿತ ಮಂಡಳಿಯ ನಡೆ ಸಂಶಯಕ್ಕೆ ಕಾರಣವಾಗಿದೆ : ಸದಾಶಿವ ಬಂಗೇರ ಆತಂಕ Rating: 5 Reviewed By: karavali Times
Scroll to Top